PULIGERE ಪುಲಿಗೆರೆಯ ಸೊಮೇಶ್ವರನಿಗೆ ಜಲಾಭಿಷೇಕ

PULIGERE ಲಕ್ಷ್ಮೇಶ್ವರದ ಐತಿಹಾಸಿಕ ಸೊಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥ ವಿಶೇಷ ಪೂಜೆ, ಜಲಾಭಿಷೇಕ ನಡೆಸಲಾಯಿತು
PULIGERE ಲಕ್ಷ್ಮೇಶ್ವರದ ಐತಿಹಾಸಿಕ ಸೊಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥ ವಿಶೇಷ ಪೂಜೆ, ಜಲಾಭಿಷೇಕ ನಡೆಸಲಾಯಿತು
Published on
ಲಕ್ಷ್ಮೇಶ್ವರ: ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ (PULIGERE) ಮಳೆಗಾಗಿ ವಿಶೇಷ ಜಲಾಭಿಷೇಕ ಮತ್ತು ಪೂಜಾ ಕೈಂಕರ್ಯ ಸೋಮವಾರ ಬೆಳಗ್ಗೆ  6 ಗಂಟೆಯಿಂದ ಪ್ರಾರಂಭಿಸಲಾಯಿತು. 24 ತಾಸು ನಿರಂತರವಾಗಿ ಶ್ರೀ ಸೋಮೇಶ್ವರನಿಗೆ ಜಲಾಭಿಷೇಕ ನಡೆಯಲಿದೆ. ಮಳೆಯ ಅಭಾವವಿರುವ ಸಂದರ್ಭಗಳಲ್ಲಿ, ರೈತರ ಒಳಿತಿಗಾಗಿ ಮತ್ತು ಉತ್ತಮ ಮಳೆ ಬೆಳೆಗಾಗಿ ಊರಿನ ಜನರು ಹಾಗೂ ಭಕ್ತರು ಒಟ್ಟಾಗಿ ಪ್ರಾರ್ಥನೆ ನೆರವೇರಿಸುವುದು ವಾಡಿಕೆಯಾಗಿದೆ. ಈ ಬಾರಿ ಬಹುತೇಕ ಮುಂಗಾರು ಮಳೆ ಆಗದೆ ಇರುವುದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನ್ನೆಲೆಯಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ, ದೇವಸ್ಥಾನ ಅರ್ಚಕರ ಸಮಿತಿ, ಸೋಮೇಶ್ವರ ಜಾತ್ರಾ ಕಮಿಟಿಯವರು ಸೋಮೇಶ್ವರನಿಗೆ ನಿರಂತರವಾಗಿ ಜಲಾಭಿಷೇಕ ಮತ್ತು ವಿಶೇಷ ಪೂಜೆ, ರುದ್ರಾಭಿಷೇಕ ಹಮ್ಮಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಅರ್ಚಕರಾದ ಚಿಕ್ಕರಸ ಪೂಜಾರ, ರಾಘವೇಂದ್ರ ಪೂಜಾರ, ಕೃಷ್ಣಾಜಿ ಪೂಜಾರ ನೇತೃತ್ವದಲ್ಲಿ ರುದ್ರಾಭಿಷೇಕದ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ನಂತರ ನೆಲಗಡಲೆ ಬೆಲ್ಲದ ಪ್ರಸಾದ ವಿತರಿಸಲಾಯಿತು. ಅನೇಕ ಭಕ್ತರು ಆಗಮಿಸಿ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ಭಕ್ತಿಯಿಂದ ಓಂ ನಮಃ ಶಿವಾಯ ಮಂತ್ರ ಜಪಿಸಿದರು. ಸಂಜೆಯಿಂದ ಅಹೋರಾತ್ರಿ ನೂರಾರು ಭಕ್ತರು ಸೇರಿ ಭಜನಾ ತಂಡಗಳೊಂದಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸಿದರು.
ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೂ ಜಲಾಭಿಷೇಕ ನಡೆಯಲಿದೆ. ಖುತ್ವಿಜರ ವೇದಘೋಷಗಳ ಮಧ್ಯೆ ರುದ್ರಾಭಿಷೇಕ ನಡೆಯಲಿದೆ. ಮಂಗಳವಾರ ಪೂಜೆ ಮುಕ್ತಾಯದ ನಂತರ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಸೋಮಣ್ಣ ಬಂಡಿವಾಡ, ಜಿ.ಎಸ್. ಗುಡಗೇರಿ, ವಿರೂಪಾಕ್ಷ ಆದಿ, ನಂದೀಶ ಬಂಡಿವಾಡ, ಮಯೂರಗೌಡ  ಪಾಟೀಲ, ಜಯಪ್ರಕಾಶ ಹೊಟ್ಟಿ,  ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಶಿವಯೋಗಿ ಅಂಕಲಕೋಟಿ ಹಾಗೂ ಟ್ರಸ್ಟ್ ಕಮೀಟಿ ಸದಸ್ಯರು ಅರ್ಚಕರ ಸಮಿತಿ ಅಧ್ಯಕ್ಷ ದಿಗಂಬರ ಪೂಜಾರ, ಕೃಷ್ಣ ಪೂಜಾರ, ನಾಗರಾಜ ಪೂಜಾರ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net