Marriage ವೀರಭದ್ರೇಶ್ವರ-ಭದ್ರಕಾಳಿ ಮದುವೆ ಸಂಭ್ರಮ

ನರೇಗಲ್ಲ ಹಿರೇಮಠದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ ನಾಲ್ಕನೆಯ ದಿನವಾದ ಬುಧವಾರ ಶ್ರೀ ವೀರಭದ್ರ ದೇವರು ಮತ್ತು ಭದ್ರಕಾಳಿಯರ ವಿವಾಹ (Marriage) ಮಹೋತ್ಸವವು ಜರುಗಿತು.
ನರೇಗಲ್ಲ ಹಿರೇಮಠದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ ನಾಲ್ಕನೆಯ ದಿನವಾದ ಬುಧವಾರ ಶ್ರೀ ವೀರಭದ್ರ ದೇವರು ಮತ್ತು ಭದ್ರಕಾಳಿಯರ ವಿವಾಹ (Marriage) ಮಹೋತ್ಸವವು ಜರುಗಿತು.
Published on
ನರೇಗಲ್ಲ: ಹಿರೇಮಠದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ ಶ್ರೀ ವೀರಭದ್ರ ದೇವರು ಮತ್ತು ಭದ್ರಕಾಳಿಯರ ವಿವಾಹ (Marriage) ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮಲ್ಲನಗೌಡ ಪಾಟೀಲ ದಂಪತಿ ವರನ ಕಡೆಯವರಾದರೆ, ಪ್ರಶಾಂತ ಜುಟ್ಲ ದಂಪತಿ ವಧುವಿನ ಕಡೆಯವರಾಗಿ ಶಾಸ್ತ್ರ ಬದ್ಧವಾದ ಮದುವೆಯನ್ನು ನಡೆಸಿಕೊಟ್ಟರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ವೀರಭದ್ರ ಮತ್ತು ಭದ್ರಕಾಳಿಯರ ಮದುವೆಯ ಸನ್ನಿವೇಶವನ್ನು ವಿವರಿಸಿದರು. ಇಂದಿನ ಈ ಮದುವೆ ಅಲೌಕಿಕ ವ್ಯಕ್ತಿಗಳದ್ದಾಗಿದ್ದರೂ, ಲೌಕಿಕ ವ್ಯಕ್ತಿಗಳ ಮದುವೆ ಹೇಗಾಗುತ್ತದೆಯೋ ಹಾಗೆಯೆ ನಿಭಾಯಿಸಿದ್ದನ್ನು ಕಂಡು ನಮಗೆ ತುಂಬಾ ಸಂತಸವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳು ಊರಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೆ ಊರು ಮತ್ತು ಜನ ಸಮೃದ್ಧವಾಗಿ, ಸುಖ, ಸಂತೋಷ, ನೆಮ್ಮದಿಯಿಂದ ಬಾಳುತ್ತಾರೆ. ಎಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳು ನಡೆಯುತ್ತವೆಯೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದರು.
ತಾ.ಪಂ. ಮಾಜಿ ಸದಸ್ಯ ಸಂದೇಶ ದೊಡ್ಡಮೇಟಿ ಮಾತನಾಡಿ, ಇಂತಹ ಅಪರೂಪದ ಸನ್ನಿವೇಶ ಕಾಣುವ ಸುಯೋಗ ನಮಗೆ ಒದಗಿ ಬಂದಿದೆ. ಇಂತಹ ಅವಕಾಶವನ್ನು ಸೃಷ್ಟಿಸಿಕೊಟ್ಟ ಶ್ರೀಗಳಿಗೆ ಕೃತಜ್ಞತೆಗಳು ಎಂದರು.
ಚಂದ್ರಶೇಖರಯ್ಯ ಭುಸನೂರಮಠ, ಚನ್ನಬಸಪ್ಪ ಗೋದಿ, ವೀರೇಶ ನೇಗಲಿ ಉಪಸ್ಥಿತರಿದ್ದರು. ವಿವಾಹ ಕಾರ್ಯವನ್ನು ರುದ್ರಮುನಿ ಸ್ವಾಮಿ ಹಿರೇಮಠ ಮತ್ತು ರುದ್ರಯ್ಯ ಸೊಬರದ ನಡೆಸಿಕೊಟ್ಟರು. ಶಿವಾನಂದ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net