) ಕಾಮಗಾರಿಗಳು ಪ್ರಾರಂಭವಾಗಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ತಾಪಂ ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಕೃಷ್ಣಪ್ಪ ಧರ್ಮರ ಸೂಚನೆ ನೀಡಿದರು.
ಶಿಗ್ಲಿ, ದೊಡ್ಡೂರು, ಬಾಲೇಹೊಸೂರು, ಹುಲ್ಲೂರ, ಅಡರಕಟ್ಟಿ, ಆದರಳ್ಳಿ ಗ್ರಾಮ ಪಂಚಾಯಗಳಲ್ಲಿನ ನಡೆದಿರುವ ವಿಬಿ-ಜಿ ರಾಮ್ ಜಿ ಯೋಜನೆ ಕಾಮಗಾರಿಗಳನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, ವಿಬಿ ಜಿರಾಮ್‌ಜಿ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕೂಲಿಯನ್ನು 370 ರೂ.ಗಳಿಂದ 382 ರೂ.ಗಳಿಗೆ ಹೆಚ್ಚಿಸಲಾಗಿದೆ. ಅಳತೆಗೆ ತಕ್ಕ ಕೆಲಸ ನೀಡಿ, ಪೂರ್ಣ ಕೂಲಿಯನ್ನು ಕಾರ್ಮಿಕರು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮೊದಲಿದ್ದ 100 ದಿನಗಳ ಬದಲಾಗಿ 125 ದಿನಗಳಿಗೆ ಹೆಚ್ಚಿಸಲಾಗಿದೆ. ಯೋಜನೆಯಡಿ ಸುಮಾರು 318 ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕ 125 ದಿನಗಳಿಗೆ ಹೆಚ್ಚಳ ಮಾಡಲಾಗಿದೆ, ಕೃಷಿ ಕೂಲಿ ಕಾರ್ಮಿಕರ ವರ್ಷಕ್ಕೆ ಸುಮಾರು 47, 750 ರೂ. ಗಳಿಸಲು ಅವಕಾಶವಿದೆ. 60 ದಿನಗಳು ಕೃಷಿ ಚಟುವಟಿಕೆಗೆ ಯೋಜನೆಯ ಕೂಲಿ ಕೆಲಸದಿಂದ ವಿರಾಮ ನೀಡಲಾಗುತ್ತಿದೆ. ಪ್ರತಿದಿನ ಕೂಲಿ ಕಾರ್ಯಕ್ಕೆ ಬರುವವರು ಎರಡು ಬಾರಿ ಎನ್‌ಎಂಎಂಎಸ್ ಹಾಜರಾತಿ ಕಡ್ಡಾಯವಾಗಿ ಕೂಲಿ ಕಾರ್ಮಿಕರು ನೀಡಬೇಕು. ಗ್ರಾಪಂನಿಂದ ಅರ್ಜಿ ನಮೂನೆಯಲ್ಲಿ ಕೂಲಿ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಬಹುದಾಗಿದೆ. ಈ ಕುರಿತು ವಿಬಿ ಜಿರಾಮ್‌ಜಿ ಯೋಜನೆಯ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಪಿಡಿಒ ರವಿ ಕೊರಕನವರ, ರಿಯಾಜ್ ಖದೀಬ್, ಗೋವಿಂದ ರೆಡ್ಡಿ, ಕೆ.ಸಿ. ಕಡೂರು, ಕಾರ್ಯದರ್ಶಿ ಕವಿತಾ ಅಣ್ಣಿಗೇರಿ, ವಡಕನಗೌಡ್ರು, ತಾಂತ್ರಿಕ ಸಂಯೋಜಕ ಹರೀಶ ಸೊಬರದ, ಟಿಐಇಸಿ ಮಂಜುನಾಥಸ್ವಾಮಿ ಎಚ್ ಎಂ., ತಾಂತ್ರಿಕ ಸಹಾಯಕ ಶ್ರೀನಿವಾಸ, ಫಕೀರೇಶ ನಿಟ್ಟಾಲಿ, ಶ್ರೀಧರ್ ಕುಲಕರ್ಣಿ, ಪ್ರವೀಣ ಕರಕನಗೌಡ್ರು, ಖಾಸಿಂಸಾಬ್ ನದಾಫ್, ಸತೀಶ್ ಅರಿಶಿಣದ, ತಿರುಕಪ್ಪ ಬಾಲೆಹೊಸೂರ, ಶಿಲ್ಪ ಲಮಾಣಿ, ಮಂಜುಳಾ ಕಟ್ಟಿಮನಿ, ಟಿಆರ್‌ಎಂ ಗೌರಮ್ಮ ಲಮಾಣಿ, ಪರಮೇಶ ಲಮಾಣಿ, ವಿನೋದ ಲಮಾಣಿ, ಇತರರಿದ್ದರು.