ಕಲಕೇರಿ ಅಂಬೇಡ್ಕರ್‌ನಗರ ಬಡಾವಣೆಯಲ್ಲಿರುವ ಯಲ್ಲಪ್ಪ ಫಕೀರಪ್ಪ ಕೇಳಗೇರಿ ಎಂಬುವರು ಹಳೆಯ ಮನೆ ತೆರವುಗೊಳಿಸಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಕಳೆದೊಂದು ವಾರದಿಂದ ಹಳೆಯ ಗೋಡೆಗಳನ್ನು ಕಾರ್ಮಿಕರಿಂದ ತೆರವು ಮಾಡಿಸುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ನಾಲ್ವರು ಕಾರ್ಮಿಕರ ಪೈಕಿ ಮೃತ ಶೇಖಪ್ಪ ಹಾಗೂ ನಾಗಪ್ಪ ಮನೆಯ ಪಾಯ ಅಗೆಯುತ್ತಿದ್ದರು. ಗಾಯಾಳು ಮಹಾಂತೇಶ ಹಾಗೂ ರಾಕೇಶ ಗೋಡೆ ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಏಕಾಏಕಿ ದುರ್ಘಟನೆ ಸಂಭವಿಸಿದೆ. ತಾಲೂಕಾಸ್ಪತ್ರೆಯಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತೆ ಮಾಡಿತು. ಮೃತ ಶೇಖಪ್ಪನ ಪತ್ನಿ ಪ್ರೇಮಾ, ನಾಗಪ್ಪನ ಪತ್ನಿ ಶಿವಗಂಗವ್ವ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.