ಮೆಕ್ಕೆಜೋಳ ಖರೀದಿಗೆ ಎರಡು ದಿನ ಗಡುವು Maize

ಮೆಕ್ಕೆಜೋಳ Maize ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕಾಗಿ ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಒಕ್ಕೂಟ ಹಾಗೂ ಸಂಘಟನೆಗಳಿಂದ ಗುರುವಾರ ಪೊರಕೆ ಚಳವಳಿ ನಡೆಸಲಾಯಿತು.
ಮೆಕ್ಕೆಜೋಳ Maize ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕಾಗಿ ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಒಕ್ಕೂಟ ಹಾಗೂ ಸಂಘಟನೆಗಳಿಂದ ಗುರುವಾರ ಪೊರಕೆ ಚಳವಳಿ ನಡೆಸಲಾಯಿತು.
Published on
ಲಕ್ಷ್ಮೇಶ್ವರ: ಮೆಕ್ಕೆಜೋಳ Maize ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕಾಗಿ ನ.29ರಿಂದ ಉಗ್ರ ಸ್ವರೂಪದ ಹೋರಾಟ ಆರಂಭವಾಗಲಿದ್ದು, ಮುಂದಾಗಬಹುದಾದ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಹೋರಾಟ ವೇದಿಕೆ ಮುಖಂಡ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಎಚ್ಚರಿಸಿದ್ದಾರೆ.
ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಖರೀದಿ ಕೇಂದ್ರ ಆರಂಭಕ್ಕೆ ಮೀನ-ಮೇಷ ಎಣಿಸುತ್ತಿದೆ. ನ.28ರಂದು ಇದೇ ವೇದಿಕೆಯಲ್ಲಿ ಹರಿಹರ, ಕೂಡಲ ಶಿರಹಟ್ಟಿ, ಕುಂದಗೋಳ, ಆದ್ರಳ್ಳಿ, ಹೂವಿನಶಿಗ್ಲಿ ಸೇರಿ ಅನೇಕ ಮಠಾಧೀಶರ ಉಪಸ್ಥಿತಿಯಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಾಜಿ ಮತ್ತು ಸಂಗೊಳ್ಳಿ ರಾಯಣ್ಣನ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ.
28ರೊಳಗಾಗಿ ಒಳಗೆ ಖರೀದಿ ಕೇಂದ್ರಗಳು ಪ್ರಾರಂಭಗೊಳ್ಳದಿದ್ದರೆ ನ. 29ರಿಂದ ಸರ್ಕಾರದ ಅಣುಕು ಶವಯಾತ್ರೆ, ಸರ್ಕಾರಿ ಕಚೇರಿಗಳಿಗೆ ಬೀಗ, ಗೋವಿನಜೋಳ ರಸ್ತೆಗೆ ಹಾಕುವುದು, ಮಠಾಧೀಶರೊಂದಿಗೆ ಉಪವಾಸ ಸತ್ಯಾಗ್ರಹದಂತಹ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಪಕ್ಷಾತೀತ ರೈತ ಹೋರಾಟದ ಸಂಘದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ನಾಗರಾಜ ಚಿಂಚಲಿ ಮಾತನಾಡಿದರು.
ರೈತರಾದ ಚಂಬಣ್ಣ ಬಾಳಿಕಾಯಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ಶಿವಾನಂದ ಲಿಂಗಶೆಟ್ಟಿ, ನೀಲಪ್ಪ ಶರಸೂರಿ, ಚನ್ನಪ್ಪ ಷಣ್ಮುಕಿ, ಕಾಶಪ್ಪ ಮುಳಗುಂದ, ಹನಮಂತಪ್ಪ ಮಾದರ, ದೇವಪ್ಪ ಮಲ್ಲೂರ, ಸುರೇಶ ಹಟ್ಟಿ, ಬಸವರಾಜ ಹಿರೇಮನಿ, ಪ್ರಕಾಶ ಕೊಂಚಿಗೇರಿಮಠ, ಅನೇಕರಿದ್ದರು.

ಹೆದ್ದಾರಿಯಲ್ಲಿ ಪೊರಕೆ ಚಳವಳಿ

ಲಕ್ಷ್ಮೇಶ್ವರ: ಗುರುವಾರ ನೂರಾರು ರೈತರು ಪೊರಕೆ ಚಳವಳಿ ನಡೆಸಿದರು.ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಪೊರಕೆ ಹಿಡಿದು ಕಸ ಗೂಡಿಸುವ ಮೂಲಕ ರೈತರು ಮನಸು ಮಾಡಿದರೆ ಈ ಪೊರಕೆ ಕಸವನ್ನು ಸ್ವಚ್ಛ ಮಾಡಿದಂತೆ ಸರ್ಕಾರವನ್ನೇ ಗುಡಿಸಿ ಹಾಕುವ ತಾಕತ್ತು ರೈತರಿಗಿದೆ ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net