

ಲಕ್ಷ್ಮೇಶ್ವರ:
ಪಟ್ಟಣವು ಐತಿಹಾಸಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಇಲ್ಲಿನ ರಸ್ತೆಗಳು ಮಾತ್ರ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿವೆ. ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ. ಮಳೆಯಾದರೆ ಮೊಣಕಾಲುದ್ದ ನೀರು ನಿಲ್ಲುತ್ತದೆ. ಜತೆಗೆ ಕೆಸರುಮಯ, ಬೇಸಿಗೆಯಲ್ಲಿ ಧೂಳಿನಿಂದ ಜನತೆ ರೋಸಿ ಹೋಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಳಚರಂಡಿ ಕಾಮಗಾರಿಯಿಂದ ಸಂಕಷ್ಟ
ಪಟ್ಟಣದಲ್ಲಿ ಅನೇಕ ರಸ್ತೆಗಳು ಹದಗೆಟ್ಟಿವೆ. ಪುರಸಭೆಯ 15ನೇ ಹಣಕಾಸು ಯೋಜನೆಯಡಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಪಟ್ಟಣದಲ್ಲಿನ ರಸ್ತೆಗಳ ದುರಸ್ತಿ ಮತ್ತು ಮೂಲಸೌಲಭ್ಯ ಕಲ್ಪಿಸಲು ವಿಶೇಷ ಅನುದಾನಕ್ಕಾಗಿ ಪೌರಾಡಳಿತ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
— ಪರಶುರಾಮ ಗುಡದಾರಿ, ಪುರಸಭೆ ಮುಖ್ಯಾಧಿಕಾರಿ