toilet problem: ಐದು ವರ್ಷದಿಂದ ಶೌಚಗೃಹಕ್ಕೆ ಗ್ರಹಣ!

ಕಾಮಗಾರಿ ಪ್ರಾರಂಭವಾಗಿ ಸುಮಾರು ವರ್ಷಗಳು ಕಳೆದರೂ ಪೂರ್ಣ ಗೊಳ್ಳದೆ ಅರ್ಧದಲ್ಲೇ ನಿಂತ ಶೌಚಾಲಯ ಕಟ್ಟಡ ಕಾಮಗಾರಿ.
ಕಾಮಗಾರಿ ಪ್ರಾರಂಭವಾಗಿ ಸುಮಾರು ವರ್ಷಗಳು ಕಳೆದರೂ ಪೂರ್ಣ ಗೊಳ್ಳದೆ ಅರ್ಧದಲ್ಲೇ ನಿಂತ ಶೌಚಾಲಯ ಕಟ್ಟಡ ಕಾಮಗಾರಿ.
Published on
ಮಂಜುನಾಥ ಕುದರಿಕೋಟಿ ಗಜೇಂದ್ರಗಡ
ಬಯಲು ಬಹಿರ್ದೆಸೆ ಮುಕ್ತ ಮಾಡಲು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಶೌಚಗೃಹದ ಅರ್ಧಕ್ಕೆ ನಿಂತು ಜನರ ದುಡ್ಡು ಹಾಳಾಗುತ್ತಿದೆ.
ಇದಕ್ಕೆ ನಿದರ್ಶನ ಎಂಬಂತೆ ತಾಲೂಕಿನ ಸೂಡಿ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಜೋಡು ಕಳಸದ ಗುಡಿ ಹತ್ತಿರ ಶೌಚಗೃಹ ನಿರ್ಮಾಣ ಕಾಮಗಾರಿ ಆರಂಭವಾಗಿ ಐದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ಪ್ರವಾಸಿಗರು ಬಯಲು ಬಹಿರ್ದೆಸೆಯನ್ನೇ ಆಶ್ರಯಿಸುವಂತಾಗಿದೆ.
ಪ್ರವಾಸೋದ್ಯಮ ಇಲಾಖೆಯ ಅನುದಾನದಡಿ ಲ್ಯಾಟಡ್ ಆರ್ಮಿ ಇಲಾಖೆ 20 ಲಕ್ಷ ರೂ. ಅನುದಾನದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ಐದು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಹತ್ತಾರು ಸಮಸ್ಯೆ: ಅರೆಬರೆ ನಿರ್ಮಾಣವಾಗಿರುವ ಶೌಚಗೃಹದ ಸುತ್ತ ಮುಳ್ಳಿನ ಕಂಟಿಗಳು ಬೆಳೆದಿವೆ. ಇದರಿಂದ ಹುಳು-ಹುಪ್ಪಡಿಗಳ ಕಾಟ ಹೆಚ್ಚಾಗಿ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ವಿದ್ಯುತ್, ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಿಲ್ಲ. ಶೌಚಾಲಯಕ್ಕೆ ಬಾಗಿಲುಗಳನ್ನು ಅಳವಡಿಸಿಲ್ಲ ಇದರೊಟ್ಟಿಗೆ ಹತ್ತಾರು ಸಮಸ್ಯೆಗಳು ಇಲ್ಲಿ ಬೇರೂರಿವೆ.
"

ಶೌಚಗೃಹ ಕಾಮಗಾರಿ ಪ್ರಾರಂಭಿಸಿ ಐದು ವರ್ಷಗಳು ಕಳೆದಿವೆ. ಅವಧಿಯೊಳಗೆ ಕೆಲಸ ಪೂರ್ಣಗೊಳಿಸಬೇಕಾದ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಹಲವಾರು ಬಾರಿ ಊರಿನ ಸಾರ್ವಜನಿಕರು ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರವಾಸಿಗರ ಹಿತದೃಷ್ಟಿಯಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು.

— ವೀರಣ್ಣ ಶೆಟ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net