DEMAND ಜೋಳದ ಮೇವಿಗೆ ಬಲು ಡಿಮಾಂಡ್

DEMAND ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಮದ ಜಮೀನಿನಲ್ಲಿ ಜೋಳದ ಮೇವು ಮಾರಾಟ ಮಾಡಿ ಟ್ರಾೃಕ್ಟರ್‌ಗೆ ತುಂಬಿರುವುದು.
DEMAND ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಮದ ಜಮೀನಿನಲ್ಲಿ ಜೋಳದ ಮೇವು ಮಾರಾಟ ಮಾಡಿ ಟ್ರಾೃಕ್ಟರ್‌ಗೆ ತುಂಬಿರುವುದು.
Published on
ನರೇಗಲ್ಲ: ಬಿಸಿಲಿನಿನ ಪ್ರಖರತೆ ಹೆಚ್ಚಾಗುತ್ತಿದ್ದು, ಜಾನುವಾರುಗಳಿಗೆ ಆಹಾರ ನೀರಿನ ಕೊರತೆ (DEMAND) ಎದುರಾಗು ಸಾಧ್ಯಗಳು ದಟ್ಟವಾಗಿವೆ.
ಜಿಲ್ಲೆಯಲ್ಲಿ ಜೋಳದ ಮೇವು, ಕಡಲೆ, ಶೇಂಗಾ, ಗೋಧಿ ಹೊಟ್ಟಿಗೆ ಬೇಡಿಕೆ ಸೃಷ್ಟಿಯಾಗಿದೆ. ರೈತರು ಹೆಚ್ಚಾಗಿ ಮಾರುಕಟ್ಟೆಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜಾನುವಾರುಗಳಿಗೆ ಹೊಟ್ಟು, ಮೇವು ಸಿಗದಂತಾಗಿದೆ. ಇನ್ನೊಂದು ಕಡೆ ಕುರಿಗಾಹಿಗಳ ಅಲೆದಾಟವೂ ತಪ್ಪುತ್ತಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಮಳೆ ಕಡಿಮೆಯಾಗಿದ್ದು, ಮಳೆಯಾಶ್ರಿತ ಭೂಮಿ ಬರಡಾಗಿದೆ. ಪಾರಂಪರಿಕ ಬೆಳೆಗಳಾದ ಶೇಂಗಾ, ಗೋಧಿ, ಕುಸುಬೆ, ಜೋಳದ ಬದಲು ಸೂರ್ಯಕಾಂತಿ, ಈರುಳ್ಳಿ, ಮೆಣಸಿಕಾಯಿ, ಹತ್ತಿ, ಮೆಕ್ಕೆಜೋಳದಂತಹ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಿದೆ. ಶೇಂಗಾ ಹೊಟ್ಟು, ಜೋಳ ಮೇವು, ಗೋಧಿ ಹೊಟ್ಟು ಬೆಲೆ ಹೆಚ್ಚಾಗಿದೆ. ಈಗಾಗಲೇ ಹೋಬಳಿಯಾದ್ಯಂತ ಬಿಸಿಲಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಇದರಿಂದ ಜಾನುವಾರುಗಳಿಗೆ ಮೇವಿನ, ಹೊಟ್ಟಿನ ಕೊರತೆ ಜತೆಗೆ ನೀರಿನ ತಾಪತ್ರಯವೂ ಹೆಚ್ಚಾಗಿದೆ.
ಕ್ಷೇತ್ರ ವ್ಯಾಪ್ತಿಯ ವಿವರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಲ್ಲಿ ಜೋಳ 1025 ಹೆಕ್ಟೇರ್, ಶೇಂಗಾ 2510 ಬೆಳೆಯಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳವನ್ನು 4862 ಹೆಕ್ಟೇರ್, ಗೋಧಿ 1050 ಹೆಕ್ಟೇರ್, ಕಡಲೆ 18795 ಹೆಕ್ಟೇರ್, ಶೇಂಗಾ 1895 ಹೆಕ್ಟೇರ್ ಬೆಳೆಯಲಾಗಿದೆ. ಕಳೆದ ಹಂಗಾಮಿಗಿಂತಲೂ ಈ ಪ್ರಮಾಣ ಕಡಿಮೆಯೇ. ಹೀಗಾಗಿ ಜಿಲ್ಲೆಯಲ್ಲಿ ಮೇವು-ಹೊಟ್ಟು ಸಮಸ್ಯೆ ಸೃಷ್ಟಿಯಾಗುತ್ತಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net