ಫೆ. 17ರಂದು 78.730 ಗ್ರಾಂ. ಬಂಗಾರ ಹಾಗೂ 711.47 ಗ್ರಾಂ. ಬೆಳ್ಳಿ ಆಭರಣ ಕಳವಾಗಿತ್ತು. ಕಳ್ಳರ ಪತ್ತೆಗೆ ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜೆ.ಬಿ. ಪೂಜಾರ, ಎಂ.ಎಂ ಶೀಗಿಹಳ್ಳಿ, ಸದಾಶಿವ ಕದಂ, ಮಲ್ಲಿಕಾರ್ಜುನ ಮನೇನಕೊಪ್ಪ, ಎಸ್.ಎ. ಖಾಜಿ, ಆರ್.ಎಸ್. ಬನ್ನಿಗೋಳ, ಎಚ್.ವೈ. ಮ್ಯಾಗಳಮನಿ, ಮುತ್ತಪ್ಪ ಬಾವಿ ಇದ್ದರು. ತಂಡದ ಕಾರ್ಯವನ್ನು ಎಸ್.ಪಿ ರೋಹನ್ ಜಗದೀಶ ಶ್ಲಾಘಿಸಿದ್ದಾರೆ.