ಭಕ್ತರ ಉದ್ಧಾರವೇ ಸತ್ಪುರುಷರ ಪರಮ ಧರ್ಮ

ಶ್ರೀ ಚನ್ನವಿರೇಶ್ವರ ಮಹಾಸ್ವಾಮೀಜಿ ಆಶೀರ್ವಚನ
Achievers were felicitated by the Viraktamatha of Konnur in Naragund Taluk. Present on the occasion were Sri Channaveereshwara Swamiji, Shantalinga Shrigalu, C.R. Saligaudra, Prakashgauda Tirakangaudra, and others.
ನರಗುಂದ ತಾಲೂಕು ಕೊಣ್ಣೂರಿನ ವಿರಕ್ತಮಠದಿಂದ ಸಾಧಕರನ್ನು ಸೋಮವಾರ ಸನ್ಮಾನಿಸಲಾಯಿತು. ಶ್ರೀ ಚನ್ನವೀರೇಶ್ವರ ಸ್ವಾಮೀಜಿ, ಶಾಂತಲಿಂಗ ಶ್ರೀಗಳು, ಸಿ.ಆರ್. ಸಾಲಿಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಇತರರಿದ್ದರು.
Published on: 

ನರಗುಂದ: ಭಕ್ತರ ಉದ್ಧಾರ ಮಾಡುವುದೇ ಸಾಧು ಸಂತರು, ಮಹಾತ್ಮರ ಪರಮ ಧರ್ಮವಾಗಿದೆ. ಮಾನವನ ಸುಖ, ಶಾಂತಿ, ನೆಮ್ಮದಿ ಜೀವನಕ್ಕೆ ಆಧ್ಯಾತ್ಮಿಕವೇ ಪ್ರಮುಖ ರಹದಾರಿ ಎಂದು ಶ್ರೀ ಚನ್ನವಿರೇಶ್ವರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಕೊಣ್ಣೂರ ಗ್ರಾಮದ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀಮಠದ 15ನೇ ಮಾಸಿಕ ಶಿವಾನುಭವ, ಭಗತಸಿಂಗ್ ಯುವ ಸೇನೆಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಾಮೆಂಟ್ ಸಮಾರೋಪ ಸಮಾರಂಭ, ವಾಲ್ಮೀಕಿ ಜಯಂತಿ, ಗ್ರಾಪಂ ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ಬಹು ಸೊಗಸಾಗಿ ಪರಿಚಯಿಸಿದ ಶ್ರೇಯಸ್ಸು ಮಹಾತ್ಮರಿಗೆ ಸಲ್ಲುತ್ತದೆ. ನಮ್ಮ ಜೀವನವನ್ನು ಎತ್ತರಿಸಿಕೊಳ್ಳಬೇಕಾದರೆ ಮಹಾತ್ಮರ ಜೀವನ ತಿಳಿದು ಅವರ ಅನುಭಾವವನ್ನು ಅಳವಡಿಸಿಕೊಳ್ಳಬೇಕು. ಪ್ರಾಣಿ, ಪಕ್ಷಿ, ವನ್ಯ ಮೃಗಗಳು ಸಹ ಕೂಡಿ ಬಾಳುವುದನ್ನು ಕಲಿತಿವೆ. ಆದರೆ, ಮನುಷ್ಯ ಮಾತ್ರ ಸಾಂಘಿಕ ಬದುಕು ಅಳವಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾನೆ. ಹುಟ್ಟು-ಸಾವು ಮಧ್ಯದ ಬದುಕಿನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಭೈರನಹಟ್ಟಿ ಶ್ರೀ ಶಾಂತಲಿಂಗ ಸ್ವಾಮೀಜಿ ಉಪದೇಶಾಮೃತ ನೀಡಿದರು. ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿದರು. ಜ್ಞಾನೇಶ್ವರ ತಿಪ್ಪಣ್ಣವರ, ಎಸ್.ಪಿ. ವಾಸನ, ಶಂಕರಗೌಡ ಯಲ್ಲಪ್ಪಗೌಡ್ರ, ಸಿ.ಆರ್. ಸಾಲಿಗೌಡ್ರ, ಅಶೋಕ ಕಾಮಣ್ಣವರ, ಎಸ್.ಎಸ್. ಪೊಲೀಸ ಪಾಟೀಲ, ಲಾಲಸಾಬ ಅರಗಂಜಿ, ಮುತ್ತುಸ್ವಾಮಿ ಮಳಲಿ, ಕೊಟ್ರೇಶ ಕೊಟ್ರಶೆಟ್ಟರ, ಸುನೀಲ ಕಳಸಣ್ಣವರ, ಬಿ.ಎಂ. ಕೋರಿಗಣ್ಣವರ, ಎಂ.ಆರ್. ಸಾಲಿಗೌಡ್ರ, ಬಾಬು ಮುದಕವಿ, ಸಂದೀಪಗೌಡ ಯಲ್ಲಪ್ಪಗೌಡ್ರ, ಈರಣ್ಣ ಕಳಸಣ್ಣವರ, ಎಸ್.ಎಸ್. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net