ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ರಾತ್ರಿಯಿಡೀ ಬೆಡ್ ರೂಂನಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಮರುದಿನ ಪೊಲೀಸರ ಎದುರು ಕೊಲೆಗೂ ತನಗೂ ಏನೂ ಸಂಬಂಧವೇ ಇಲ್ಲ ಇಲ್ಲವೆನ್ನುವಂತೆ ನಾಟಕವಾಡಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ. ತಾನೇ ಕೊಲೆ ಮಾಡಿದ್ದಾಗಿ ಆರೋಪಿ ಕವಿತಾ ಒಪ್ಪಿಕೊಂಡಿದ್ದಾಳೆ. ಕವಿತಾಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಸಿಪಿಐ ಸತ್ಯಪ್ಪ ಮಾಳಗೊಂಡ ’ವಿಜಯವಾಣಿ’ಗೆ ತಿಳಿಸಿದರು.