ವೀರಶೈವ ಧರ್ಮದಲ್ಲಿ ಶ್ರೀ ಗುರುವಿಗೆ ಮಹತ್ವದ ಸ್ಥಾನ ಕಲ್ಪಿಸಿದ್ದಾರೆ. ಗುರುವಿನಿಂದಲೇ ಎಲ್ಲವನ್ನು ಪಡೆಯಲು ಸಾಧ್ಯವಿದೆ ಎಂಬ ಭಾವನೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ ಎಂದರು. ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳು ಆಶೀರ್ವಚನ ನೀಡಿ, ನಾಡು ಸಮೃದ್ಧವಾಗಬೇಕು. ರೈತನ ಬೆಳೆಗೆ ಉತ್ತಮ ಬೆಲೆ ದೊರೆತು ಬದುಕು ಉತ್ತಮವಾಗಬೇಕು. ಧರ್ಮ, ಜಾತಿ ಎನ್ನುವುದಕ್ಕಿಂತ ನಾವೆಲ್ಲ ಭಾರತೀಯತರು ಎನ್ನುವ ಸಮನ್ವಯ ಭಾವ ಎಲ್ಲರಲ್ಲೂ ಮೂಡಬೇಕು. ವೀರಶೈವ- ಲಿಂಗಾಯತ ಪುರಾತನವಾಗಿದೆ. ಯುಗ- ಯುಗದಿಂದ ಅಸ್ಥಿತ್ವದಲ್ಲಿದ್ದು, ಧರ್ಮ ಪ್ರಚಾರ ಕಾರ್ಯ ಮಾಡಿಕೊಂಡು ಬಂದಿದೆ. ಪಂಚಪೀಠಗಳು, ವೀರಶೈವ- ಲಿಂಗಾಯತವು ಐದು ಸಾವಿರ ವಗರ್ಗಳ ಪುರಾತನವಾಗಿದೆ. ಭಕ್ತರ ಧಾರ್ಮಿಕ, ಆಧ್ಯಾತ್ಮಿಕ ಧ್ವನಿಯಾಗಿ ಕೆಲಸ ಮಾಡಿಕೊಂಡು ಬಂದಿದೆ ಎಂದು ಹೇಳಿದರು.