ತಾಲೂಕಿನ ಬೆಳ್ಳಟ್ಟಿ, ವಡವಿ, ಸುಗನಹಳ್ಳಿ, ನೆಲೋಗಲ್, ಸೂರಣಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಓಸಿ ಮತ್ತು ಇಸ್ಪೀಟ್ ಜೂಜಾಟ ರಾಜಾರೋಷವಾಗಿ ನಡೆಯುತ್ತಿದ್ದು, ನೂರಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಪ್ರಭಾವಿಗಳ ಮನೆ ಹಾಗೂ ಫಾರ್ಮ್ ಹೌಸ್‌ಗಳಲ್ಲಿ ಅಕ್ರಮ ಜೂಜು ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಏಕೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ಶಾಸಕರು ಪ್ರಶ್ನಿಸಿದರು. ಅಮಾಯಕರನ್ನು ಸಂಕಷ್ಟಕ್ಕೆ ಸಿಲುಕಿಸುವುದನ್ನು ಬಿಟ್ಟು, ನೈಜ ಜೂಜುಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ, ಅದಕ್ಕೆ ಬೇಕಾದ ದಾಖಲೆಗಳನ್ನು ನಾನೇ ನೀಡುತ್ತೇನೆ ಎಂದರು.