Literature ವಿಶ್ವ ಸಾಹಿತ್ಯಕ್ಕೆ ವಚನಗಳ ಕೊಡುಗೆ ಅಪಾರ

ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ Literature ಭವನದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಚಿಂತನ ಮಾಲೆ-31ರ ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಉದ್ಘಾಟಿಸಿದರು.
ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ Literature ಭವನದಲ್ಲಿ ಶನಿವಾರ ಆಯೋಜಿಸಿದ್ದ ಶರಣ ಚಿಂತನ ಮಾಲೆ-31ರ ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಉದ್ಘಾಟಿಸಿದರು.
Published on
ಮುಂಡರಗಿ: 12ನೇ ಶತಮಾನದಲ್ಲಿನ ಕೆಲವೊಂದು ಶರಣರ ಪರಿಚಯ ನಮಗಿದೆ. ಆದರೆ, ಇನ್ನುಳಿದ 770 ಗಣಂಗಳ ಪರಿಚಯ, ಅವರ ಕಾಯಕ ನಿಷ್ಠೆಯ ಬಗ್ಗೆ ಬೆಳಕು ಚೆಲ್ಲುವುದು ಅವಶ್ಯವಿದೆ ಎಂದು ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಾಹಿತ್ಯ ಭವನದಲ್ಲಿ ತಾಲೂಕು ಕಸಾಪ, ಶಸಾಪ ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆ 31ರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಾಹಿತ್ಯಕ್ಕೆ Literature ವಚನ ಸಾಹಿತ್ಯ ಅಮೋಘ ಕೊಡುಗೆ ನೀಡಿದೆ. ಶರಣರು ಲೋಕದ ಡೊಂಕು ತೋರಿಸುವುದರ ಜತೆಗೆ ಅವುಗಳನ್ನು ತಮ್ಮ ವಚನದಿಂದ ತಿದ್ದುವುದಕ್ಕೆ ಪ್ರಯತ್ನಿಸಿದರು. ಉಪೇಕ್ಷಿತ ಶರಣರ ಬಗ್ಗೆ ಶರಣ ಚಿಂತನ ಮಾಲೆಯನ್ನು ಹಮ್ಮಿಕೊಂಡು ನಿರಂತರವಾಗಿ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಅಮುಗಿ ದೇವಯ್ಯ ಕುರಿತು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಶಿಕ್ಷಕ ಜಿ.ಎಂ. ಲಿಂಗಶೆಟ್ಟರ ಮಾತನಾಡಿ, ಕನ್ನಡಿ ಕಾಯಕದ ಅಮುಗಿ ದೇವಯ್ಯ ಕಮಳೇಶ್ವರಲಿಂಗ ಎಂಬ ಅಂಕಿತದಿಂದ ವಚನಗಳನ್ನು ರಚಿಸಿದ್ದಾರೆ.
ಸಿದ್ಧರಾಮರೊಡನೆ ಸಂಬಂಧ ಪಡೆದು ಪ್ರಸಿದ್ಧನಾದ ಅಮುಗಿ ದೇವಯ್ಯ ನೇಯ್ಗೆ ಕಾಯಕದಿಂದ ಸೇವೆ ಮಾಡಿದವರು. ಶರಣರ ಲಕ್ಷಣವನ್ನು, ಸತಿಪತಿ ಭಾವವನ್ನು ಹಾಗೂ ಜ್ಞಾನ-ಕ್ರಿಯೆಗಳನ್ನು ತಮ್ಮ ವಚನದಲ್ಲಿ ಸೊಗಸಾಗಿ ಬಿಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಸಾಪ ಗೌರವಾಧ್ಯಕ್ಷ ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ಸಮಾಜದ ಸ್ವಾಸ್ಥೃ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ಶರಣರ ವಿಚಾರಗಳನ್ನು ತಿಳಿಸಿ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಅಗತ್ಯವಿದೆ ಎಂದರು.
ಅಭಿನಯ ರತ್ನ ಪ್ರಶಸ್ತಿ ಪುರಸ್ಕೃತ ಮಹಾಂತೇಶ ತ್ಯಾಮನವರ ಮತ್ತು ಅಕಾಡೆಮಿ ಬಾಲಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ ಅವರನ್ನು ಸನ್ಮಾನಿಸಲಾಯಿತು. ಶಸಾಪ ತಾಲೂಕಾಧ್ಯಕ್ಷ ಡಾ.ಸಂತೋಷ ಹಿರೇಮಠ, ಪದಾಧಿಕಾರಿಗಳು ಹಾಗೂ ಸಾಹಿತ್ಯಸಕ್ತರು, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net