TEJASVI ಅಭಿಮಾನಿಯ ಸೇವಾ ಕಾರ್ಯ ಮೆಚ್ಚಿದ ಸಂಸದ ತೇಜಸ್ವಿ ಸೂರ್ಯ

TEJASVI  ಮುಂಡರಗಿ ಪಟ್ಟಣದಲ್ಲಿ ಜಮೀನಿನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಜನ್ಮದಿನ ನಿಮಿತ್ತ ಮಂಗಳವಾರ ಉಚಿತವಾಗಿ ಬೋರ್‌ಬೆಲ್ ಕೊರೆಸಲಾಯಿತು
TEJASVI ಮುಂಡರಗಿ ಪಟ್ಟಣದಲ್ಲಿ ಜಮೀನಿನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಜನ್ಮದಿನ ನಿಮಿತ್ತ ಮಂಗಳವಾರ ಉಚಿತವಾಗಿ ಬೋರ್‌ಬೆಲ್ ಕೊರೆಸಲಾಯಿತು
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಜನ್ಮದಿನ ಇಂದು
  • ಬಡವರಿಗೆ ಉಚಿತ ಬೋರ್‌ವೆಲ್ ಕೊರೆಸಿ ಜನ್ಮದಿನಾಚರಣೆ
  • ವಿಡಿಯೋ ಕಾಲ್ ಮಾಡಿ ಹರ್ಷ ವ್ಯಕ್ತಪಡಿಸಿದ ಸಂಸದ
ಮುಂಡರಗಿ: ಪಟ್ಟಣದ ತೇಜಸ್ವಿ (TEJASVI) ಸೂರ್ಯ ಅಭಿಮಾನಿ ಬಳಗದಿಂದ ಮಂಗಳವಾರ ಬಡ ರೈತರಾದ ಫಕೀರಪ್ಪ ಬ್ಯಾಲವಾಡಗಿ, ರಮೇಶ ಬ್ಯಾಲವಾಡಗಿ ಅವರ ಜಮೀನಿನಲ್ಲಿ ಉಚಿತ ಬೋರ್‌ಬೆಲ್ ಕೊರೆಸುವ ಮೂಲಕ ಸಂಸದ ತೇಜಸ್ವಿ ಸೂರ್ಯ ಅವರ ಜನ್ಮದಿನವನ್ನು ಶಿಷ್ಠವಾಗಿ ಆಚರಿಸಲಾಯಿತು.
ನಮ್ಮಲ್ಲಿರುವ ಹಣವನ್ನು ಮತ್ತೊಬ್ಬರ ಬೆಳವಣಿಗೆಗೆ ವಿನಿಯೋಗ ಮಾಡಬೇಕು. ಪರಸ್ಪರ ಸಹಾಯ, ಸಹಕಾರವಿದ್ದರೆ ಪ್ರತಿಯೊಬ್ಬರ ಬದುಕು ಸುಂದರವಾಗಿರುತ್ತದೆ ಎಂದು ಸಮಾಜ ಸೇವಕ ಚಂದ್ರು ನಾವಿ ಹೇಳಿದರು.
ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಪವನ್ ಮೇಟಿ ಮಾತನಾಡಿ, ತೇಜಸ್ವಿ ಸೂರ್ಯ ಅವರ ಜನ್ಮದಿನದಂದು ಕಳೆದ ಏಳು ವರ್ಷದಿಂದ ಜನಪರ ಕೆಲಸ ಮಾಡುತ್ತಿದ್ದೇವೆ. ತೇಜಸ್ವಿ ಅವರು ಮುಂದೆ ರಾಷ್ಟ್ರನಾಯಕರಾಗಿ ಬೆಳೆದು, ಉನ್ನತ ಸ್ಥಾನ ತಲುಪಿ ಯುವಕರಿಗೆ ಮಾದರಿಯಾಗಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪವನ್ ಮೇಟಿ ಅವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ವಾಟ್ಸ್‌ಆ್ಯಪ್ ವಿರಿಯೋ ಕರೆ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಧನ್ಯವಾದ ತಿಳಿಸಿದ ತೇಜಸ್ವಿ ಸೂರ್ಯ ಅವರು, ಪವನ್ ಮೇಟಿ ಅವರ ಜನೋಪಕಾರಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net