camp ಬೇಸಿಗೆ ಶಿಬಿರದಿಂದ ಮಕ್ಕಳ ಸಾಮರ್ಥ್ಯ ಹೆಚ್ಚಳ

campಬೇಸಿಗೆ ಶಿಬಿರ
campಬೇಸಿಗೆ ಶಿಬಿರ
Published on
ನರಗುಂದ: ಪಟ್ಟಣದ ಕಣಕೀಕೊಪ್ಪ ರಸ್ತೆಯ (camp) ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಸಂಕಲ್ಪ ಬೇಸಿಗೆ ತರಬೇತಿ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಮೇಶ ಶಿರುಂದಮಠ ಮಾತನಾಡಿ, ಮಕ್ಕಳ ಸೃಜನಶೀಲತೆ, ದೈಹಿಕ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸಲು ಬೇಸಿಗೆ ತರಬೇತಿ ಶಿಬಿರಗಳು ಅತ್ಯುತ್ತಮ ವೇದಿಕೆಗಳಾಗಿವೆ ಎಂದರು. ಸಂಸ್ಥೆಯ ಕೋಶಾಧ್ಯಕ್ಷ ಎನ್.ಎಸ್. ಹಿರೇಮಠ ಮಾತನಾಡಿದರು. ವೈ.ಸಿ. ಗುಡಿಸಲಮನಿ, ಸಂಗಮೇಶ ಮಡಿವಾಳರ, ಪ್ರವೀಣ ಪ್ಯಾಟಿ, ರಮೇಶ ಐನಾಪೂರ, ಜ್ಯೋತಿ ಕೋಳೂರಮಠ, ಐಶ್ವರ್ಯ ಹುರಕಡ್ಲಿ, ಎಸ್.ಎಸ್. ಹಂದಿಗೋಳ, ಅಕ್ಕಮ್ಮ ಬುಗಡಿಕಟ್ಟಿ, ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net