Suicide: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಡರಗಿ: ಡೆತ್‌ನೋಟ್ ಬರೆದಿಟ್ಟು ಬಿಎ ಎಂಎಸ್ಸ್ ಮೂರನೇ ವರ್ಷದ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪಟ್ಟಣದ ಎಸ್.ಬಿ.ಎಸ್. ಆಯುರ್ವೇದಿಕ್ ಕಾಲೇಜ್ ಆವರಣದ ವಸತಿ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ಈಶ್ವರ ಸೋಮನಾಥ ಗಾದಗೆ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈಶ್ವರ ನನ್ನ ಸಾವಿಗೆ ಯಾರೂ ಕಾರಣರಲ್ಲ. ಕ್ಷಮಿಸಿ ಅಮ್ಮ, ಅಪ್ಪ ಎಂದು ಇಂಗ್ಲಿಷ್ ಬರಹದಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನೊಂದಿಗೆ ಮಾತನಾಡುವುದಕ್ಕೆ ಸೋಮನಾಥ ಬುಧವಾರ ಕರೆ ಮಾಡಿದಾಗ ಈಶ್ವರ ಕರೆ ಸ್ವೀಕರಿಸಲಿಲ್ಲ. ಕಾರಣ ಈಶ್ವರನ ಸ್ನೇಹಿನಿಗೆ ಸೋಮನಾಥ ಅವರು ಕರೆ ಮಾಡಿ ಈಶ್ವರಗೆ ಮಾತನಾಡುವಂತೆ ತಿಳಿಸಿದ್ದಾರೆ. ಈ ವಿಷಯ ತಿಳಿಸಲು ಆತನ ಸ್ನೇಹಿತ ವಸತಿ ಕೊಠಡಿಗೆ ತೆರಳಿದಾಗ ಈಶ್ವರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರಿಶೀಲಿಸಿ ಈಶ್ವರ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಮಗನ ಸಾವಿನ ಬಗ್ಗೆ ಈಶ್ವರ ತಂದೆ ಸೋಮನಾಥ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net