SUICIDE ಪದವಿ ಕಾಲೇಜ್ ಉಪನ್ಯಾಸಕಿ ಆತ್ಮಹತ್ಯೆ, ಕಾರಣವೇನು ಗೊತ್ತಾ...?

ಸುಜಾತಾ ಬಿ.ಜಿ.
ಸುಜಾತಾ ಬಿ.ಜಿ.
Published on

ಮುಂಡರಗಿ: ಕೌಟುಂಬಿಕ ಕಲಹದಿಂದ ಮನನೊಂದು ಉಪನ್ಯಾಸಕಿಯೊಬ್ಬರು ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆಗೆ (SUICIDE) ಶರಣಾಗಿದ್ದಾರೆ. ತುಮಕೂರು ಜಿಲ್ಲೆ ಅರಕೇರಿ ತಾಲೂಕಿನ ಸುಜಾತಾ ಬಿ.ಜಿ. (41) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ. ಸುಜಾತಾ ಅವರು ಪಟ್ಟಣದ ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸುಜಾತಾ ಅವರು ಮೊದಲ ಪತಿಗೆ ವಿಚ್ಛೇದನ ನೀಡಿ ಆರು ತಿಂಗಳ ಹಿಂದೆ ಮಂಜುನಾಥ ಎಂಬುವರನ್ನು ಎರಡನೇ ಮದುವೆಯಾಗಿದ್ದರು. ಪಟ್ಟಣದಲ್ಲಿ ಸುಜಾತಾ ಒಬ್ಬರೇ ವಾಸವಾಗಿದ್ದರು. ತಮ್ಮ ಎರಡನೇ ಪತಿಯೊಂದಿಗೆ ಕೌಟುಂಬಿಕ ಕಲಹವಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ತಮ್ಮ ಸಾವಿಗೆ ಎರಡನೇ ಪತಿ ಮಂಜುನಾಥ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಮಂಜುನಾಥ ಕುಸಗಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net