ಶಿಕ್ಷಕ ಎಂ.ಎಚ್.ದಿಂಡವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೊರ್ವ ಶಿಕ್ಷಕ ಎಸ್.ಸಿ. ಹಾವೇರಿ ವರದಿ ವಾಚನ ಮಂಡಿಸಿದರು. ವರ್ಗಾವಣೆಗೊಂಡ ಶಿಕ್ಷಕರಾದ ಎಸ್.ಐ. ಮುರಡಿ, ಪಿ.ಎಸ್. ಲಚ್ಚಾಣ, ಎ.ಐ. ಡಂಬಳ ಅವರು ತಲಾ 25 ಸಾವಿರ ಊ. ಶಾಲಾ ದತ್ತಿ ನಿಧಿಗೆ ದೇಣಿಗೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತಗೌಡ್ರ ಭರಮಗೌಡ್ರ, ಮುಖ್ಯಗುರುಗಳಾದ ಬಿ.ಎನ್. ಗಾಯಕವಾಡ, ನಿಂಗಪ್ಪ ಮತ್ತೂರ, ಸಂಗಮೇಶ ಅಂಗಡಿ, ವಿ.ಜಿ. ಜೊಗೋಜಿ, ಎಸ್.ಬಿ.ಹಿರೇಮಠ, ವಿನೋದಾ ಗೋಣಿ, ವಿದ್ಯಾ ತೆಳಗಿನಮನಿ, ಸಿ.ಆರ್. ಮೂಲಿಮನಿ, ಪ್ರವೀಣ ಭಜಂತ್ರಿ, ರಾಜು ಅಂಗಡಿ, ಹಾಜರಿದ್ದರು.