ನರಗುಂದ: ತಾಲೂಕಿನ ಕಣಕೀಕೊಪ್ಪದ ಲಿಂ. ಶ್ರೀ ಗುರು ( SriGuru) ಬಾಲಲೀಲಾ ಸಂಗಮೇಶ್ವರ ಅಜ್ಜನವರ ಜಾತ್ರಾ ಮಹೋತ್ಸವ, ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ 48ನೇ ಪಟ್ಟಾಧಿಕಾರದ ವರ್ಧಂತಿ, ಸಾಮೂಹಿಕ ವಿವಾಹ ಹಾಗೂ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಜ. 31ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂರ್ಣಕುಂಭ, ಸುಮಂಗಲೆಯರಿಂದ ಆರತಿ, ದೀಪೋತ್ಸವ ಮೆರವಣಿಗೆ ಜರುಗುವುದು. ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ, ಶತಮಾನೋತ್ಸವ ಸಮಾರಂಭ. ಸಂಜೆ 5ಗಂಟೆಗೆ ರಥೋತ್ಸವದ ನಂತರ ಪಲ್ಲಕ್ಕಿಯಲ್ಲಿ ಶ್ರೀ ಬಾಲಲೀಲಾ ಸಂಗಮೇಶ್ವರ ಅಜ್ಜನ ಬೆಳ್ಳಿ ಉತ್ಸವ ಮೆರವಣಿಗೆ, ರಾತ್ರಿ 8 ಗಂಟೆಗೆ ಧರ್ಮಸಭೆ, ಮಹಾ ಮಂಗಲೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.