ಮುಂಡರಗಿ: ಭೂಮಿಗೆ ರೈತರು ಸಮತೋಲನದ ಗೊಬ್ಬರಗಳನ್ನು (fertilizer) ಬಳಸಬೇಕು. ಯೂರಿಯಾ, ಡಿಎಪಿ ಗೊಬ್ಬರಗಳಿಗೆ ಸೀಮಿತವಾಗದೆ ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಹುಳಿ ಮಜ್ಜಿಗೆಯನ್ನು ನಿಯಮಿತವಾಗಿ ಉಪಯೋಗಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.