SIR ಎಸ್‌ಐಆರ್ ಲಕ್ಷ್ಮೇಶ್ವರ ಮುಂಚೂಣಿ

ಬಿಎಲ್‌ಒಗಳ ಎಸ್‌ಐಆರ್ ಪ್ರಕ್ರಿಯೆಯನ್ನು ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರ್ ಎಂ. ಧನಂಜಯ ಪರಿಶೀಲಿಸಿದರು.
ಬಿಎಲ್‌ಒಗಳ ಎಸ್‌ಐಆರ್ ಪ್ರಕ್ರಿಯೆಯನ್ನು ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರ್ ಎಂ. ಧನಂಜಯ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶೇ. 95 ಪ್ರಗತಿ ಸಾಧನೆ
  • ಮನೆ ಮನೆಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ಶಿರಹಟ್ಟಿ ಮತಕ್ಷೇತ್ರದ ಸಾಧನೆ ಮುಂಚೂಣಿಯಲ್ಲಿದ್ದು ಅದರಲ್ಲೂ ಲಕ್ಷ್ಮೇಶ್ವರ ತಾಲೂಕು ಈಗಾಗಲೇ ಶೇ. 95ರಷ್ಟು ಕಾರ್ಯ ಸಾಧಿಸಿ ಜಿಲ್ಲೆಯಲ್ಲಿ ಅಗ್ರ ಸ್ಥಾನಕ್ಕೇರಿದೆ. ನಿಗದಿತ ಅವಧಿಯೊಳಗೆ ಶೇ. 100ರಷ್ಟು ಗುರಿ ತಲುಪುವತ್ತ ದಾಪುಗಾಲಿಟ್ಟಿದೆ.
242 ಬೂತ್, 102 ಮತಗಟ್ಟೆಗಳಿರುವ ಲಕ್ಷೇಶ್ವರ ತಾಲೂಕಿನಲ್ಲಿ ಒಟ್ಟು 96,016 ಮತದಾರರಿದ್ದಾರೆ. ಇದುವರೆಗೆ 79474 ಮತದಾರರ ಮಾಹಿತಿ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಮಾಡಳ್ಳಿ, ಯಳವತ್ತಿ, ಯತ್ತಿನಹಳ್ಳಿ, ಕುಂದ್ರಳ್ಳಿ ತಾಂಡಾ, ಸಂಕದಾಳ, ಶೆಟ್ಟಿಕೆರಿ, ಅಕ್ಕಿಗುಂದ ತಾಂಡಾ, ನಾದಿಗಟ್ಟಿ, ಸೋಗಿವಾಳ, ಅದ್ರಳ್ಳಿ, ಬಡ್ನಿ, ಹಿರೇಮಲ್ಲಾಪುರ, ಕೊಂಡಿಕೊಪ್ಪ, ಗುಲಗಂಜಿಕೊಪ್ಪ, ಗೋವನಾಳ, ಸುವರ್ಣಗಿರಿ, ಉಳ್ಳಟ್ಟಿ, ಶ್ಯಾಬಳಾ, ಶಿಗ್ಲಿ, ಯಲ್ಲಾಪುರ, ದೊಡ್ಡೂರ ಮತ್ತು ಲಕ್ಷೆ ್ಮೀಶ್ವರದ ಪಂಪ ಲೈಬ್ರರಿ, ಸರ್ಕಾರಿ ಉರ್ದು ಶಾಲೆ, ಎಪಿಎಂಸಿ ಸೇರಿದಂತೆ ಒಟ್ಟು 55 ಮತಗಟ್ಟೆಗಳಲ್ಲಿ ಶೇ. 100 ಡಿಜಿಟಲೀಕರಣ ಪೂರ್ಣಗೊಂಡಿದೆ. ಇನ್ನೂ 5234 ಮತದಾರರ ಮಾಹಿತಿ ಡಿಜಿಟಲೀಕರಣ ಮಾತ್ರ ಬಾಕಿಯಿದ್ದು, 9079 ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರಗತಿಯಾಗಿದ್ದು, ಪಟ್ಟಣದಲ್ಲಿ ಶೇ. 70ರಷ್ಟು ಮಾತ್ರ ಸಾಧನೆಯಾಗಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಅಧಿಕಾರಿಗಳ ಭೇಟಿ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಹಾಗೂ ತಹಸೀಲ್ದಾರ್ ಎಂ. ಧನಂಜಯ ಅವರ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಪ್ರತಿ ಮತಗಟ್ಟೆಯ ಬಿಎಲ್‌ಒ, ಮೇಲ್ವಿಚಾರಕರ ಶ್ರಮ ಮುಖ್ಯವಾಗಿದೆ. ಪ್ರತಿಯೊಬ್ಬ ಮತದಾರರ ವಿವರವನ್ನು ನಿಖರವಾಗಿ ದಾಖಲಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಕುಟುಂಬದ ಸದಸ್ಯರ ಸಹಕಾರದೊಂದಿಗೆ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಸಮರ್ಪಕ ಯೋಜನೆ, ನಿತ್ಯ ಪ್ರಗತಿ ಪರಿಶೀಲನೆ, ಕ್ಷೇತ್ರ ಭೇಟಿ ಹಾಗೂ ಬಿಎಲ್‌ಒಗಳ ಪರಿಶ್ರಮದಿಂದ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ. ಇದೇ ವೇಗದಲ್ಲಿ ಕಾರ್ಯ ಪೂರ್ಣಗೊಂಡರೆ ಶೇ. 100ರಷ್ಟು ನಿಖರ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಲಕ್ಷೆ ್ಮೀಶ್ವರ ತಾಲೂಕು ರಾಜ್ಯಕ್ಕೇ ಮಾದರಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
"

ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ, ಪ್ರಚಾರ, ಸಭೆ ಮಾಡಲಾಗಿದೆ. ತಾಲೂಕು ಹಂತದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕೆಲ ಮತದಾರರು ಉದ್ಯೋಗ ಅರಸಿ ಹೋಗಿದ್ದರೂ ಅಂತಹ ಕುಟುಂಬಗಳಲ್ಲಿನ ಸದಸ್ಯರಿಂದ ಎಲ್ಲ ಮಾಹಿತಿ ಪಡೆದು ಫಾರ್ಮ್ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯವರು, ಗ್ರಾಪಂ, ವಾರ್ಡ್ ಸದಸ್ಯರ ಸಹಕಾರ ಪಡೆದು ಶೇ.100 ಕಾರ್ಯ ಸಾಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

— ಧನಂಜಯ ಎಂ. ತಹಸೀಲ್ದಾರ್

ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಕಾರ್ಯದಕ್ಷತೆಯಿಂದ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಆ.8ರ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅರ್ಹ ಮತದಾರರು ಮತದಾನದ ಹಕ್ಕಿನಿಂದ ಹೊರಗುಳಿಯಬಾರದು ಮತ್ತು ಅನರ್ಹರ ಹೆಸರು ಪಟ್ಟಿಯಲ್ಲುಳಿಯಬಾರದು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರ ಸಹಕಾರ, ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.

— ಡಾ. ನಂದಾ ಹಣಬರಟ್ಟಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net