SIDDU ಜನಮನದಲ್ಲಿ ಸದಾ ಹಸಿರು ಸಿದ್ದರಾಮಯ್ಯ ಹೆಸರು

SIDDU ಸಿದ್ದರಾಮಯ್ಯ
SIDDU ಸಿದ್ದರಾಮಯ್ಯ
Published on
ಲಕ್ಷ್ಮೇಶ್ವರ: ಬಡವರು, ನೊಂದವರ, ರೈತರ ನೋವಿಗೆ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (SIDDU) ಅವರು ಕರ್ನಾಟಕದಲ್ಲಿ ಅತಿ ಹೆಚ್ಚಿನ ಅವಧಿಗೆ ಸಿಎಂ ಆಗಿ ಆಡಳಿತ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಜನರು ಅವರ ಮೇಲಿಟ್ಟಿರುವ ವಿಶ್ವಾಸ, ಜನಮಾನಸದಲ್ಲಿ ಸದಾ ಸಿದ್ದರಾಮಯ್ಯ ಅವರ ಹೆಸರು ಉಳಿಯಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಟಿ. ಈಶ್ವರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಿ. ದೇವರಾಜ ಅರಸು ಅವರು ದೀರ್ಘಾವಧಿ ಆಡಳಿತ ಮಾಡಿದ ಮುಖ್ಯಮಂತ್ರಿ ಎಂಬ ದಾಖಲೆ ಹೊಂದಿದ್ದರು. ಆ ದಾಖಲೆನ್ನು ಸಿದ್ದರಾಮಯ್ಯ ಸಮಗಟ್ಟಿದ್ದು, ಜ. 6ರಂದು ಹೊಸ ದಾಖಲೆ ಬರೆದಿದ್ದಾರೆ. ಸುಭದ್ರ ಸರ್ಕಾರ ನೀಡಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರಿಂದ ಕರ್ನಾಟಕದ ಜನತೆಗೆ ಇನ್ನೂ ಹೆಚ್ಚಿನ ಯೋಜನೆಗಳು ಹಾಗೂ ಉತ್ತಮ ಆಡಳಿತ ದೊರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೇಷ್ಠ ಆರ್ಥಿಕ ತಜ್ಞರಾಗಿಯೂ ಹೆಸರು ಗಳಿಸಿದ್ದಾರೆ ಎಂದು ಟಿ.ಈಶ್ವರ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net