Shantaveera ಸಮಾಜದ ಒಳತಿಗೆ ಶ್ರಮಿಸಿದ ಶ್ರೀ ಶಾಂತವೀರರು

Shantaveera ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ 380ನೇ ಮಾಸಿಕ ಶಿವಾನುಭವ, ಸಿಂದಗಿ ಶಾಂತವೀರ ಪಟ್ಟಾದ್ಯಕ್ಷರ ಪುಣ್ಯ ಸ್ಮರಣೋತ್ಸವ ಸೋಮವಾರ ಆಚರಿಸಲಾಯಿತು.
Shantaveera ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ 380ನೇ ಮಾಸಿಕ ಶಿವಾನುಭವ, ಸಿಂದಗಿ ಶಾಂತವೀರ ಪಟ್ಟಾದ್ಯಕ್ಷರ ಪುಣ್ಯ ಸ್ಮರಣೋತ್ಸವ ಸೋಮವಾರ ಆಚರಿಸಲಾಯಿತು.
Published on
ನರಗುಂದ: ಸಮಾಜವೇ ನನ್ನ ಉಸಿರೆಂದು ಜೀವನದುದ್ದಕ್ಕೂ ಸಮಾಜದ ಒಳತಿಗಾಗಿಯೇ ಬದುಕಿದ ಸಿಂದಗಿ ಶಾಂತವೀರ (Shantaveera) ಪಟ್ಟಾದ್ಯಕ್ಷರು ಜಂಗಮರ ಜಗದ್ಗುರುಗಳು. ಕರುನಾಡಿಗೆ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳನ್ನು ನೀಡುವುದರ ಮೂಲಕ ಜಾತ್ಯತೀತ ಸಂದೇಶ ಸಾರಿದ ಪೂಜ್ಯರ ತತ್ವಗಳು ಸಾರ್ವಕಾಲಿಕ ಎಂದು ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ ಬಣ್ಣಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀಮಠದ 380ನೇ ಮಾಸಿಕ ಶಿವಾನುಭವ, ಸಿಂದಗಿ ಶಾಂತವೀರ ಪಟ್ಟಾದ್ಯಕ್ಷರ 46ನೇ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿ, ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಶಿವಯೋಗಿಗಳ ಕರಕಮಲ ಸಂಜಾತರಾಗಿದ್ದ ಪಟ್ಟಾದ್ಯಕ್ಷರು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅನ್ನ ಅಕ್ಷರ, ಕಾಯಕದ ಜತೆಗೆ ಎಲ್ಲ ಸಮಾಜದ ಬಡ ಮಕ್ಕಳಿಗಾಗಿ ಪಾಠ ಶಾಲೆಯನ್ನು ತೆರೆದು ರಜತ ಗೋಪುರದಂತಿರುವ ಕರ್ನಾಟಕದ ಆಧ್ಯಾತ್ಮ ಪರಂಪರೆಗೆ ಸುವರ್ಣ ಕಳಶವನ್ನಿಟ್ಟ ಈ ಶತಮಾನದ ಶ್ರೇಷ್ಠ ಸಂತರು ಎಂದು ಬಣ್ಣಿಸಿದರು.
ಮೃತ್ಯುಂಜಯ ಕಾಡದೇವರಮಠ ಮುಖ್ಯ ಅತಿಥಿಯಾಗಿದ್ದರು. ಕನ್ನಡದ ಕಟ್ಟಾಳು ಪ್ರಶಸ್ತಿ ಪುರಸ್ಕೃತ ಎಸ್.ಕೆ. ಆಡಿನ ಅವರನ್ನು ಸತ್ಕರಿಸಲಾಯಿತು. ನಿವೃತ್ತ ಪೋಲಿಸ್ ಅಧಿಕಾರಿ ಶರಣಯ್ಯ ಮೇಟಿ, ಶೋಭಾ ಆಡಿನ, ಆರ್.ಬಿ. ಚಿನಿವಾಲರ, ಆರ್.ಕೆ. ಐನಾಪೂರ, ಮಹಾಂತೇಶ ಹಿರೇಮಠ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net