ಗಜೇಂದ್ರಗಡ: ಶಿವಾಜಿ ಮಹಾರಾಜರು ಹೊಂದಿದ್ದ ಹೋರಾಟ ಮನೋಭಾವ, ತೋರಿದ ಧೈರ್ಯ, ಶೌರ್ಯ ಯುವಕರಿಗೆ ಸ್ಪೂರ್ತಿಯಾಗಿದೆ (Shivaji's) ಎಂದು ಪುರಸಭೆ ಮಾಜಿ ಸದಸ್ಯ ಯಮನಪ್ಪ ತಿರಕೋಜಿ ಹೇಳಿದರು.
ಪಟ್ಟಣದ ಬಜರಂಗದಳ ವೃತ್ತದಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಕೀಯರ ಆಡಳಿತದಿಂದ ದೇಶ ಮುಕ್ತಗೊಳಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಇಂತಹ ಮಹಾ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ ರಾಷಟ್ರೆನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಸಂಜೀವ ಜೋಶಿ ಮಾತನಾಡಿ, ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಶಿವಾಜಿಯವರ ಶ್ರಮ ಸ್ಮರಣೀಯವಾದುದಾಗಿದೆ. ಇಂತಹ ಮಹಾ ವ್ಯಕ್ತಿಯ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಗೌರವ ಸಲ್ಲಿಸಿದಂತಾಗಲಿದೆ ಎಂದರು.
ಯಶವಂತ ಕಾಂಬ್ಳೇಕರ, ಆನಂದ ಮಂತ್ರಿ, ರವೀಂದ್ರ ಶಿಂಗ್ರಿ, ವಿಶ್ವನಾಥ ಕುಷ್ಟಗಿ, ಕಿರಣ ಕಮ್ಮಾರ, ಅನುರಾಗ ಚಿನಿವಾಲರ, ಶೇಖಣ್ಣ ಇಟಗಿ, ರವಿ ಕಲಾಲ, ಪ್ರಸಾದ ಬಡಿಗೇರ, ರುದ್ರಮುನಿ ಹಿರೇಮಠ, ಆಕಾಶ ಅಂಬೋರೆ, ನಾಗರಾಜ ಜಾಡರ, ಪ್ರಮೋದ ಬಡಿಗೇರ ಇತರರು ಇದ್ದರು.