ನರಗುಂದ: ಸಿಡಿಲು ಬಡಿದು ಕುರಿಗಾಹಿ ಯುವಕ ಮೃತಪಟ್ಟು, ರೈತ ಗಂಭೀರವಾಗಿ ಗಾಯಗೊಂಡ ಟನೆ ಪಟ್ಟಣದ ಜಗಾಪೂರ ಒಳರಸ್ತೆಯಲ್ಲಿ ಬುಧವಾರ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದ ಮಾರುತಿ ಮಾಡಗೆಪ್ಪ ಕುರಿ (22) ಮೃತಪಟ್ಟವ. ನರಗುಂದ ಹಾಲಭಾವಿಕೇರಿ ಓಣಿಯ ರೈತ ನಿಂಗಪ್ಪ ಸಿಂಗಾಡೆಪ್ಪ ಮಜ್ಜಗಿ (43) ಎಂಬುವವರಿಗೆ ಬೆನ್ನು, ಕೈ&ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.