SHARANA: ಜಾತಿ ನಿರ್ಮೂಲನೆಗೆ ಶ್ರಮಿಸಿದ ಶರಣರು

ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಹಡಪದ ಅಪ್ಪಣ್ಣ, ಲಿಂಗಮ್ಮ ಅವರ ಜಯಂತಿ ಆಚರಿಸಲಾಯಿತು. ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶರಣಬಸವ ಅಪ್ಪಗಳು, ಡಾ.ಅನ್ನದಾನಿ ಮೇಟಿ, ಈರಣ್ಣ ಹಡಪದ ಇತರರಿದ್ದರು.
ಮುಂಡರಗಿ ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಹಡಪದ ಅಪ್ಪಣ್ಣ, ಲಿಂಗಮ್ಮ ಅವರ ಜಯಂತಿ ಆಚರಿಸಲಾಯಿತು. ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶರಣಬಸವ ಅಪ್ಪಗಳು, ಡಾ.ಅನ್ನದಾನಿ ಮೇಟಿ, ಈರಣ್ಣ ಹಡಪದ ಇತರರಿದ್ದರು.
Published on
ಮುಂಡರಗಿ: ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಜಾತಿ ಶ್ರೇಷ್ಠತೆಯ ವ್ಯಸನವು ಸಮಾಜಕ್ಕೆ ಮಾರಕ. 12ನೇ ಶತಮಾನದಲ್ಲಿ ಬಸವಾದಿ ಶರಣರು (SHARANA) ಜಾತಿ ಪದ್ಧತಿ ಹೋಗಲಾಡಿಸಲು ಪ್ರತಿಯೊಬ್ಬರಿಗೂ ಅನುಭವ ಮಂಟಪದ ಮೂಲಕ ಜ್ಞಾನದ ಬಾಗಿಲನ್ನು ತೆರೆದರು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ, ಲಿಂಗಮ್ಮ ಅವರ ಜಯಂತಿ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.‘ಪ್ರತಿಯೊಬ್ಬರು ಜಾತಿ ಭೇದವನ್ನು ಮರೆತು, ಮನುಷ್ಯತ್ವ ಹೊಂದಬೇಕು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಭಾರತದ ಅತ್ಯಂತ ಪ್ರಾಚೀನ ಗುರು ಆದಿಯೋಗಿ ಶಿವ. ದಲಿತ ಮತ್ತು ಕೆಳವರ್ಗದ ಸಮುದಾಯದಿಂದ ಬಂದ ಶಿವನ ಜ್ಞಾನವನ್ನು ಇಡೀ ಜಗತ್ತಿಗೆ ಪೌರಾಣಿಕ ಕಲ್ಪನೆಯಲ್ಲಿ ತಲುಪಿಸಿದವರು ವ್ಯಾಸ ಮಹರ್ಷಿಗಳು’ ಎಂದು ಹೇಳಿದರು.
ಪ್ರವಚನಕಾರ ಶರಣಬಸವ ಅಪ್ಪಗಳು ಮಾತನಾಡಿ, ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯಕ್ಕೆ ಹಡಪದ ಅಪ್ಪಣ್ಣ ಹಾಗೂ ಹಡಪದ ಲಿಂಗಮ್ಮನವರ ಕೊಡುಗೆ ಅನನ್ಯ. ಹಡಪದ ಅಪ್ಪಣ್ಣನವರು ಮತ್ತು ಲಿಂಗಮ್ಮನವರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ. ಅಪ್ಪಣ್ಣನವರು ಬಸವಣ್ಣನವರ ಪ್ರತಿಬಿಂಬದಂತೆ ಬಾಳಿದವರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ.ಅನ್ನದಾನಿ ಮೇಟಿ ಮಾತನಾಡಿ, ಹಡಪದ ಅಪ್ಪಣ್ಣನವರು ಮತ್ತು ಬಸವಾದಿ ಶರಣರು ವಚನಗಳ ಮೂಲಕ ಸಮಸಮಾಜ ಕಟ್ಟಲು ಶ್ರಮವಹಿಸಿದರು ಎಂದು ತಿಳಿಸಿದರು.
ತಾಲೂಕು ಹಡಪದ ಸಮಾಜದ ಅಧ್ಯಕ್ಷ ಈರಣ್ಣ ಹಡಪದ ಮಾತನಾಡಿ, ಗುರುವಿನ ಸೇವೆ ಮಾಡಿದರೆ ನಮಗೆ ಸಂಸ್ಕಾರ ದೊರೆಯುತ್ತದೆ. ಗುರು ಕರುಣೆಯಿಂದ ಬದುಕಿನಲ್ಲಿ ಸನ್ಮಾರ್ನ ಕಂಡುಕೊಳ್ಳಲು ಸಾಧ್ಯ ಎಂದರು.
ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹಾಗೂ ಶರಣಬಸವ ಅಪ್ಪಗಳು ಅವರಿಗೆ ಭಕ್ತರಿಂದ ಗುರುವಂದನೆ ಸಲ್ಲಿಸಲಾಯಿತು. ಕಸ್ತೂರೆವ್ವ ನಾವಿ, ಸಿ.ಕೆ. ಗಣಪ್ಪನವರ, ಕೋಳೂರಮಠ, ಪ್ರವಚನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net