ಚೋಳಚಗುಡ್ಡ ವೇದಾಶ್ರಮದ ಅಮೀನಗಡ ಪಾರ್ವತಿ ಪರಮೇಶ್ವರ ಅಮ್ಮನವರು, ಬಾಪುಗೌಡ ತಿಮ್ಮನಗೌಡ್ರ, ಪ್ರವಚನಕಾರ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿದರು. ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು. ನಿಂಗಯ್ಯ ಪೂಜಾರ, ಎಂ.ಆರ್. ವಿಠ್ಟಪ್ಪನವರ, ಸೋಮೇಶ ಚರೇದ, ಜಗದೀಶ ಭೋಪಳಾಪೂರ, ಫಕೀರಗೌಡ ಪೋಲಿಸಪಾಟೀಲ, ಅಶೋಕ ಶಿದ್ದಲಿಂಗಪ್ಪನವರ, ಎಂ.ಬಿ. ಮಲ್ಲಾಡದ, ಯಲಪ್ಪ ಆಲೂರ ಭಾಗವಹಿಸಿದ್ದರು. ಕಲ್ಲಪ್ಪ ಕಂಬಳಿ ಸ್ವಾಗತಿಸಿದರು, ವಿ.ಎಂ. ತೋಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸಯ್ಯ ಪೂಜಾರ ಕಾರ್ಯಕ್ರಮ ನಿರೂಪಿದರು ಗ್ರಾಮದ ಅಕ್ಕನ ಬಳಗದಿಂದ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರಿಗೆ ತುಲಾಭಾರ ಸೇವೆ ಮಾಡಲಾಯಿತು.