SCIENECE ಸಿರಿಧಾನ್ಯಗಳಲ್ಲಿ ವಿಜ್ಞಾನ ಸಂಗತಿ ಅನಾವರಣ

ನರಗುಂದ ತಾಲೂಕು ಕುರ್ಲಗೇರಿ ಗ್ರಾಮದ ವಿ.ಎನ್. ಪಾಟೀಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹೂವು, ಹಣ್ಣು, ತರಕಾರಿ, ಸಿರಿಧಾನ್ಯಗಳಲ್ಲಿ ವಿಜ್ಞಾನ ಹಲವು ವಿಷಯಗಳನ್ನು ಅನಾವರಣಗೊಳಿಸಿದ್ದರು.
ನರಗುಂದ ತಾಲೂಕು ಕುರ್ಲಗೇರಿ ಗ್ರಾಮದ ವಿ.ಎನ್. ಪಾಟೀಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹೂವು, ಹಣ್ಣು, ತರಕಾರಿ, ಸಿರಿಧಾನ್ಯಗಳಲ್ಲಿ ವಿಜ್ಞಾನ ಹಲವು ವಿಷಯಗಳನ್ನು ಅನಾವರಣಗೊಳಿಸಿದ್ದರು.
Published on
ನರಗುಂದ: ರಾಷ್ಟ್ರೀಯ ವಿಜ್ಞಾನ ದಿನದ (Science) ಅಂಗವಾಗಿ ಸೋಮವಾರ ತಾಲೂಕಿನ ಕುರ್ಲಗೇರಿ ಗ್ರಾಮದ ವಿ.ಎನ್. ಪಾಟೀಲ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಸಿರಿಧಾನ್ಯಗಳಿಂದ ರೂಪಿಸಿದ ವಿಜ್ಞಾನ ವಸ್ತುಪ್ರದರ್ಶನ ಆಕರ್ಷಕವಾಗಿತ್ತು. ಸಾಲುಮರದ ತಿಮ್ಮಕ್ಕನವರ ಹಸಿರು ಪಡೆ (ಇಕೋ ಕ್ಲಬ್) ಆಶ್ರಯದಲ್ಲಿ ಶಾಲೆಯ 8, 9, 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಮತೋಲನ ಆಹಾರದ ಕುರಿತು ಮಾನವನ ಮಿದುಳು, ಹೃದಯ, ವಿದ್ಯುತ್ ವಿಭಜನೆ, ಬಿಳಿ ಬಣ್ಣದ ಪುನರ್ ಸಂಯೋಜನೆ, ಸತುವಿನ ವರ್ತನೆ, ಸಾಬೂನು ದ್ರಾವಣ, ತೆರೆದ ಪತ್ರರಂದ್ರ, ಮುಚ್ಚಿದ ಪತ್ರರಂದ್ರ ಮೊದಲಾದ ಕಲಾಕೃತಿಗಳನ್ನು ಪ್ರದರ್ಶಿಸಿ ವಿಶೇಷವಾಗಿ ಗಮನ ಸೆಳೆದರು. ವಿಜ್ಞಾನ ಶಿಕ್ಷಕಿ ಆರ್.ಸಿ . ಹೂಲಗೇರಿ, ಶಿಕ್ಷಕ ಉಮೇಶ ಎಂ. ಮಾತನಾಡಿದರು. ಶಿಕ್ಷಕ ಬಿ.ಸಿ. ಸರಾಫ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಂ.ವಿ. ಮೇಗೂರ, ಎಸ್.ಎಂ. ಯಂಡಿಗೇರಿ, ಎಸ್.ಪಿ. ದೊಡಮನಿ, ಎಲ್.ಬಿ. ಬಸೇವಡೆಯರ್, ಬಿ.ವಿ. ಹೂಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net