ಡೇಂಜರ್ ರಸ್ತೆ: 2026ರ ಫೆಬ್ರವರಿ 5ರಂದು ಇದೇ ರಸ್ತೆಯಲ್ಲಿ ಕೂಲಿ ಕೆಲಸಕ್ಕೆ ಹೊರಟಿದ್ದ ಕ್ರೂಸರ್‌ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಮೂವರು ಕೂಲಿ ಕಾರ್ಮಿಕರು ಅಸುನೀಗಿದ್ದರು. ಅದಾದ ಬಳಿಕ ಮತ್ತೆ ಈಗ ಅದೇ ರಸ್ತೆಯಲ್ಲಿ ಕಾರ್, ಬೈಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ರೋಣದಿಂದ ಗಜೇಂದ್ರಗಡಕ್ಕೆ ತೆರಳುವ ರಸ್ತೆಯಲ್ಲಿ ಏರಿಳಿತದ ಉಬ್ಬುಗಳೇ ಹೆಚ್ಚಾಗಿವೆ. ಸಮತಾಟ್ಟದ ರಸ್ತೆ ಇಲ್ಲದಿರುವುದು ಅಪಘಾತ ಹೆಚ್ಚಾಗಲು ಕಾರಣವಾಗಿದೆ. ವಿಂಡ್ ಪವರ್ ವಾಹನಗಳ ಓಡಾಟ ಹಾಗೂ ಅತಿಯಾದ ಮರಳು ತುಂಬಿದ ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಎಂಬುದು ಜನರ ಆರೋಪ.