ಹುಲಿಗೆಮ್ಮದೇವಿ ತೇರಿನ ಚಕ್ರ ಕಟ್ wheel cut

ರೋಣ ತಾಲೂಕಿನ ಹೊನ್ನಿಗನೂರ ಗ್ರಾಮದ ಶ್ರೀ ಹುಲಿಗೆಮ್ಮದೇವಿ ರಥೋತ್ಸವದ ವೇಳೆ ತೇರಿನ ಚಕ್ರ ಮುರಿದಿರುವುದು.
ರೋಣ ತಾಲೂಕಿನ ಹೊನ್ನಿಗನೂರ ಗ್ರಾಮದ ಶ್ರೀ ಹುಲಿಗೆಮ್ಮದೇವಿ ರಥೋತ್ಸವದ ವೇಳೆ ತೇರಿನ ಚಕ್ರ ಮುರಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಥದ ಸುತ್ತ ಇರಿಸು ಕಟ್ಟಿದ್ದರಿಂದ ತಪ್ಪಿ ದೊಡ್ಡ ಅನಾಹುತ
ರೋಣ: ತಾಲೂಕಿನ ಹಿರೇಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಗನೂರ ಗ್ರಾಮದ ಶ್ರೀ ಹುಲಿಗೆಮ್ಮದೇವಿ ರಥೋತ್ಸವದ ವೇಳೆ ರಥದ ಗಾಲಿ ಮುರಿದ ಘಟನೆ ಬುಧವಾರ ನಡೆದಿದೆ. ಆದರೆ, ರಥದ ಸುತ್ತ ಇರಿಸು ಕಟ್ಟಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ನಾಲ್ಕು ಚಕ್ರದ ಹಳೇ ರಥ ಇದಾಗಿದ್ದು, ನಿಂತಲ್ಲಿಯೇ ನಿಂತಿದ್ದರಿಂದ ಗಲಿಯ ಕಟ್ಟಿಗೆಯನ್ನು ಹುಳುಗಳು ತಿಂದು ಹಾಳಾಗಿತ್ತು. ಆದರೆ, ದೇವಸ್ಥಾನ ಆಡಳಿತ ಮಂಡಳಿಯವರು ಅದನ್ನು ಗಮನಿಸಿರಲಿಲ್ಲ. ಹೀಗಾಗಿ, ರಥೋತ್ಸವ ಸಾಗುವಾಗ ರಥದ ಚಕ್ರ ಮುರಿದಿದೆ ಎನ್ನಲಾಗಿದೆ. ರಥ ಸಾಗುವಾಗ ಸುತ್ತ ಕಟ್ಟಿಗೆಯ ಇರಿಸು ಕಟ್ಟಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net