scared ತೈಲಾತಂಕ ಬಂಕ್‌ಗೆ ಮುಗಿಬಿದ್ದ ಸವಾರರು

scared ಪೆಟ್ರೋಲ್ ಸ್ಟಾಕ್ ಇಲ್ಲ,
scared ಪೆಟ್ರೋಲ್ ಸ್ಟಾಕ್ ಇಲ್ಲ,
Published on
ನರೇಗಲ್ಲ: ಹೋಬಳಿಯಲ್ಲೂ ಪೆಟ್ರೋಲ್, ಡೀಸೆಲ್ ಅಭಾವ (scared ) ಉಂಟಾಗಿದೆ. ದರ ಏರಿಕೆಯಾಗಲಿದೆ ಎಂಬ ವದಂತಿ ಹರಡಿರುವ ಬೆನ್ನಲ್ಲೇ ಗುರುವಾರ ಪಟ್ಟಣದ ಅಬ್ಬಿಗೇರಿ ಮಾರ್ಗದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ವಾಹನ ಸವಾರರು ಮುಗಿಬಿದ್ದಿದ್ದರು. ಗಜೇಂದ್ರಗಡ ಮಾರ್ಗದ ಇನ್ನೊಂದು ಬಂಕ್‌ನಲ್ಲಿ ಮಧ್ಯಾಹ್ನವೇ ಪೆಟ್ರೋಲ್- ಡೀಸೆಲ್ ಖಾಲಿ ಎಂಬ ಫಲಕ ಹಾಕಲಾಗಿತ್ತು. ಅಭಾವ ಸೃಷ್ಟಿಯಾಗುವ ಭಯದಲ್ಲಿ ಗ್ರಾಹಕರು ಬೇರೆ ಗ್ರಾಮದ ಬಂಕ್‌ಗಳಿಗೆ ಹೋಗಿ ಟ್ಯಾಂಕ್ ತುಂಬಿಸುತ್ತಿದ್ದಾರೆ. ಸುಡುವ ಬಿಸಿಲಲ್ಲಿಯೂ ವಾಹನ ಸವಾರರು ಸರತಿಯಲ್ಲಿ ನಿಂತಿದ್ದರು. ಕೆಲವರು ಕಾರು, ಬೈಕ್‌ಗಳಿಗೆ ಟ್ಯಾಂಕ್ ಫುಲ್ ಮಾಡಿಸಿಕೊಂಡು ತೆರಳುತ್ತಿದ್ದರು. ‘ಪೆಟ್ರೋಲ್ ಸ್ಟಾಕ್ ಇಲ್ಲ, ಬರುತ್ತೆ, ಇಂಧನ ಕೊರತೆ ಇಲ್ಲ. ಇಂಧನ ಸಾಕಷ್ಟಿದೆ’ ಎಂದು ಬಂಕ್ ಸಿಬ್ಬಂದಿ ಎಷ್ಟೇ ಹೇಳಿದರೂ ಸವಾರರು ಬಂಕ್‌ನಿಂದ ಕದಲಲಿಲ್ಲ. ಜನರ ಮನವೊಲಿಸುವಲ್ಲಿ ಸಿಬ್ಬಂದಿ ಹೈರಾಣಾದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net