voter list ಜವಾಬ್ದಾರಿಯುತವಾಗಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಿ

ನರಗುಂದದಲ್ಲಿ ಹಮ್ಮಿಕೊಂಡಿದ್ದ ಮತದಾರ ಪಟ್ಟಿಯ voter list ವಿಶೇಷ ತೀವ್ರ ಪರಿಷ್ಕರಣೆ, ಬಿಎಲ್‌ಎ-2 (ಎಸ್‌ಐಆರ್) ಕಾರ್ಯಾಗಾರವನ್ನು ಶಾಸಕ ಸಿ.ಸಿ.ಪಾಟೀಲ ಶನಿವಾರ ಉದ್ಘಾಟಿಸಿದರು.
ನರಗುಂದದಲ್ಲಿ ಹಮ್ಮಿಕೊಂಡಿದ್ದ ಮತದಾರ ಪಟ್ಟಿಯ voter list ವಿಶೇಷ ತೀವ್ರ ಪರಿಷ್ಕರಣೆ, ಬಿಎಲ್‌ಎ-2 (ಎಸ್‌ಐಆರ್) ಕಾರ್ಯಾಗಾರವನ್ನು ಶಾಸಕ ಸಿ.ಸಿ.ಪಾಟೀಲ ಶನಿವಾರ ಉದ್ಘಾಟಿಸಿದರು.
Published on
ನರಗುಂದ: ರಾಜ್ಯದಲ್ಲಿ ನಾ-ಕೊಡೆ ನೀ-ಬಿಡೆ ಎಂಬ ಅನಿಶ್ಚಿತತೆ ಸರ್ಕಾರದಲ್ಲಿ ಸೃಜನ ಪಕ್ಷಪಾತ, ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಸ್ಥಿರ ಸರ್ಕಾರ ಬರಬೇಕಾದರೆ ಬಿಎಲ್‌ಎ ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಸೇನಾನಿಗಳಂತೆ ನಿರಂತರ ಮತದಾರ ಪಟ್ಟಿ voter list ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಭಾರತೀಯ ಜನತಾ ಪಕ್ಷದಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ನರಗುಂದ ವಿಧಾನಸಭಾ ಮತಕ್ಷೇತ್ರದ 3 ವಿವಿಧ ಮಂಡಲಗಳ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಬಿಎಲ್‌ಎ-2 ಕಾರ್ಯಾಗಾರ (ಎಸ್‌ಐಆರ್) ಸಭಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅನರ್ಹ ಮತದಾರರು ಎಲ್ಲಿ ಸೇರ್ಪಡೆಗೊಂಡಿದ್ದಾರೋ ಅಂಥವರನ್ನು ಪತ್ತೆ ಹಚ್ಚುವುದಕ್ಕಾಗಿ ಕೇಂದ್ರ ಚುನಾವಣೆ ಆಯೋಗವು ಎಸ್‌ಐಆರ್ (ಮತದಾರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ) ನಡೆಸುತ್ತಿದೆ. ನರಗುಂದ ಮತಕ್ಷೇತ್ರದ ಕೆಲ ಲಂಬಾಣಿ ತಾಂಡಾದವರು, ಜಾವೂರಿನಿಂದ ಬಂದಿರುವವರು, ಕೊಣ್ಣೂರ ಭಾಗದ ಕೆಲವರು ಎರಡೆರಡು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ಪಕ್ಷದಿಂದ ನಿಯೋಜಿಸಿರುವ ಬಿಎಲ್‌ಎಗಳು ತಮ್ಮ ಜವಾಬ್ದಾರಿಯನ್ನರಿತು ಮತದಾರ ಪಟ್ಟಿ ಪರಿಷ್ಕರಣೆ ಕೆಲಸ ಮಾಡುವುದರ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.
ಪಶ್ಚಿಮ ಬಂಗಾಳ ಸೇರಿದಂತೆ ಬಹುತೇಕರು ಎಸ್‌ಐಆರ್ ವಿರೋಧಿಸಿದ್ದಾರೆ. ಉಚ್ಛ ನ್ಯಾಯಾಲಯದ ಆದೇಶ ಮೇರೆಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಎಲ್‌ಎ 1 ವಿಭಾಗ ಸಂಯೋಜಕ ಉಮೇಶಗೌಡ ಪಾಟೀಲ ಮಾತನಾಡಿ, ದೇಶದಲ್ಲಿ ಈಗಾಗಲೇ 14 ಬಾರಿ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದೆ. ಅನಧಿಕೃತ ಮತದಾರರನ್ನು ಪತ್ತೆ ಹಚ್ಚದೆ ಮೈಮರೆತು ಕುಳಿತರೆ ಇಡೀ ದೇಶಕ್ಕೆ ಅಪಾಯ ಎದುರಾಗುತ್ತದೆ.
ಒಂದು ದೇಶ, ಒಂದು ಮತ, ಒಂದು ಚುನಾವಣೆ ನಡೆಸುವ ಪ್ರಕ್ರಿಯೆ ಭಾಗವಾಗಿ ದೇಶಾದ್ಯಂತ 3 ತಿಂಗಳಗಳ ಕಾಲ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯಾಗಾರ ನಡೆಯಲಿದೆ ಎಂದರು.
ಬಿಜೆಪಿ ಧಾರವಾಡ ವಿಭಾಗದ ಎಸ್‌ಐಆರ್ ಸಂಯೋಜಕ ಸಂತೋಷ ಹಡಪದ ಅವರು, ಮತದಾರ ಪಟ್ಟಿ ಪರಿಷ್ಕರಣೆ ಕುರಿತು ಬಿಎಲ್‌ಎಗಳಿಗೆ ದಾಖಲೆಗಳ ಸಮೇತ ವಿವಿಧ ಮಾಹಿತಿ ನೀಡಿದರು.
ಸೋಮಶೇಖರ ಚರೇದ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶ ಅರಹುಣಸಿ, ಶಿವಪ್ಪ ವಾಲಿ, ಗೌಸ್ ತಾಲೀಮನವರ, ಸಿದ್ದೇಶ ಹೂಗಾರ, ಬಿ.ಎಂ. ಮೊಕಾಶಿ, ಶಾರದಾ ದಳವಾಯಿ, ಎಂ.ಎಚ್. ತಿಮ್ಮನಗೌಡ್ರ, ಶಿವಾನಂದ ಕೋಟಿ, ಎಸ್.ಬಿ. ಕರಿಗೌಡ್ರ, ಸುರೇಶ ಚಲವಾದಿ, ವಿ.ಎಸ್. ಹಿರೇಮಠ, ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net