ಬೆಳವಣಿಕಿ (ತಾ.ರೋಣ): ಸ್ಥಳೀಯ ಪುಟ್ಟರಾಜ (Belavaniki) ಸರ್ಕಲ್ ಹತ್ತಿರ ಕರ್ನಾಟಕ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗ್ರಾಮ ಶಾಖೆಯನ್ನು ಭಾನುವಾರ ಉದ್ಘಾಟಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಯುವಕರು ತಾಯಂದಿರಿಗೆ ಹಾಗೂ ಗುರು-ಹಿರಿಯರಿಗೆ ಗೌರವ ಕೊಡುವುದು ಕಡಿಮೆಯಾಗಿದೆ ಎಂದರು. ಹುಬ್ಬಳಿಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಿ.ಎಂ ಪಾಟೀಲ ಮಾತನಾಡಿ, ಭಾರತೀಯರ ಸಂಸ್ಕೃತಿಯ ಅರಿವನ್ನು ಮಕ್ಕಳಲ್ಲಿ ಮೂಡಿಸುವುದರಿಂದ ಅವರಲ್ಲಿ ದೇಶ ಪ್ರೇಮ ಮೂಡುತ್ತದೆ. ದೇಶದ ಬಗ್ಗೆ ಹಿರಿಯರ ಬಗ್ಗೆ ಗೌರವ ಬರುವಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಿಳಾ ಹಿರಿಯರ ನಾಗರಿಕರ ಸಮಿತಿ ಡಾ. ಸುನಂದಾ ಬೆನ್ನೂರ ಮಾತನಾಡಿದರು. ಬಸವಂತಪ್ಪ ಸುಣಗದ, ರಾಜಶೇಖರಗೌಡ ಪಾಟೀಲ, ವಾಸರಡ್ಡಿ ಶಿರೋಳ, ಸದಾಶಿವಯ್ಯ ಬಳಗಾನೂರಮಠ, ತಿಪ್ಪಣ್ಣ ತೊಗುಣಶಿ, ಮಲ್ಲಪ್ಪ ಹೊಸಂಗಡಿ, ಶಿವಣ್ಣ ಹಳ್ಳಿಕೇರಿ, ಈಶಪ್ಪ ಹೊಸಂಗಡಿ, ನಿಂಗಪ್ಪ ಸೈದಾಪುರ, ಅಂದಪ್ಪ ಹೊಸಂಗಡಿ, ವೀರಣ್ಣ ಶಿವಶಿಂಪಿ, ಬಾಬು ವೀರಗಾರ, ವೀರನಗೌಡ ಪಾಟೀಲ, ನಾಗಪ್ಪ ಜಕನೂರ ಪಾಲ್ಗೊಂಡಿದ್ದರು. ಎಸ್.ಆರ್. ಬಳಗಾನೂರಮಠ ನಿರೂಪಿಸಿ, ಎಂ.ಜಿ. ಹಿರೇಮಠ ವಂದಿಸಿದರು.