ಗದಗ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿ ಬಿಡುಗಡೆ

ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ
Gadag DC Office
Published on: 

ವಿಜಯವಾಣಿ ಸುದ್ದಿಜಾಲ ಗದಗ

ಆಕಾಂಕ್ಷಿಗಳಲ್ಲಿ ನಿರೀಕ್ಷೆ ಮೂಡಿಸಿದ್ದ ಜಿಪಂ, ತಾಪಂ ಚುನಾವಣೆಗಳ ಮೀಸಲಾತಿ ಪಟ್ಟಿ ಶನಿವಾರ ಹೊರಬಿದ್ದಿದ್ದು, ಗ್ರಾಮೀಣ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕ್ಷೇತ್ರವಾರು ವರ್ಗದ ಮೀಸಲಾತಿ ಬರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದ ಬೆನ್ನಲ್ಲೇ, ಚುನಾವಣಾ ಅಖಾಡಕ್ಕಿಳಿಯುವ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಮೂಡಿದೆ. ಈಗಾಗಲೇ ರಾಜಕೀಯವಾಗಿ ನೆಲೆ ಕಂಡುಕೊಂಡಿರುವ ಮುಖಗಳ ಜತೆಗೆ ಹೊಸಬರೂ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.

ಮೀಸಲಾತಿ ಪ್ರಕಟವಾಗುವವರೆಗೂ ಚುನಾವಣೆಗೆ ಸ್ಪರ್ಧಿಸುವ ಕನಸು ಕಾಣುತ್ತಿದ್ದ ಹಲವರು ಕಾಯುವಿಕೆಯಲ್ಲಿದ್ದರು. ಇದೀಗ ಮೀಸಲಾತಿ ಪ್ರಕಟ ಆಗಿರುವುದರಿಂದ ತಮ್ಮ ಕ್ಷೇತ್ರದ ರಾಜಕೀಯ ಭವಿಷ್ಯವನ್ನು ಲೆಕ್ಕ ಹಾಕಲು ಆರಂಭಿಸಿದ್ದಾರೆ. ಕೆಲವರಿಗೆ ಸ್ಪರ್ಧೆಗೆ ಹಸಿರು ನಿಶಾನೆ ಸಿಕ್ಕಂತಾಗಿದ್ದರೆ, ಇನ್ನೂ ಕೆಲವರಿಗೆ ಮೀಸಲಾತಿಯ ಬದಲಾವಣೆಯಿಂದ ತಮ್ಮ ರಾಜಕೀಯ ಯೋಜನೆಗಳನ್ನು ಮರು ರೂಪಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಜಿಲ್ಲೆಯ 15 ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು, ಹೊಂಬಳ- ಅನುಸೂಚಿತ ಪಂಗಡ(ಮಹಿಳೆ), ಹುಲಕೋಟಿ-ಸಾಮಾನ್ಯ, ಕುರ್ತಕೋಟಿ- ಸಾಮಾನ್ಯ, ಸೊರಟೂರ- ಹಿಂದುಳಿದ ವರ್ಗ "ಅ", ಲಕ್ಕುಂಡಿ- ಸಾಮಾನ್ಯ, ಕೋಟುಮಚಗಿ- ಹಿಂದುಳಿದ ವರ್ಗ "ಅ, ಯಳವತ್ತಿ- ಅನುಸೂಚಿತ ಜಾತಿ, ಶಿಗ್ಲಿ- ಸಾಮಾನ್ಯ (ಮಹಿಳೆ), ಸೂರಣಗಿ- ಅನುಸೂಚಿತ ಜಾತಿ(ಮಹಿಳೆ), ಮಾಗಡಿ- ಅನುಸೂಚಿತ ಜಾತಿ(ಮಹಿಳೆ), ಬೆಳ್ಳಟ್ಟಿ- ಅನುಸೂಚಿತ ಪಂಗಡ, ಹೆಬ್ಬಾಳ- ಸಾಮಾನ್ಯ (ಮಹಿಳೆ), ಡಂಬಳ- ಅನುಸೂಚಿತ ಜಾತಿ(ಮಹಿಳೆ), ಹಿರೇವಡ್ಡಟ್ಟಿ- ಹಿಂದುಳಿದ ವರ್ಗ "ಅ" (ಮಹಿಳೆ), ಕಲಕೇರಿ- ಅನುಸೂಚಿತ ಜಾತಿ, ಹಮ್ಮಿಗಿ- ಸಾಮಾನ್ಯ, ಸೂಡಿ- ಸಾಮಾನ್ಯ(ಮಹಿಳೆ), ರಾಜೂರ- ಹಿಂದುಳಿದ ವರ್ಗ "ಬ" (ಮಹಿಳೆ), ನಿಡಗುಂದಿ- ಸಾಮಾನ್ಯ, ಹೊಳೆಆಲೂರ- ಸಾಮಾನ್ಯ(ಮಹಿಳೆ), ಬೆಳವಣಕಿ- ಹಿಂದುಳಿದ ವರ್ಗ "ಅ" (ಮಹಿಳೆ), ಹಿರೇಹಾಳ- ಸಾಮಾನ್ಯ(ಮಹಿಳೆ), ಅಬ್ಬಿಗೇರಿ- ಸಾಮಾನ್ಯ, ಚಿಕ್ಕನರಗುಂದ- ಸಾಮಾನ್ಯ ಹಾಗೂ ಕೊಣ್ಣೂರ- ಸಾಮಾನ್ಯ(ಮಹಿಳೆ) ಪ್ರಕಟವಾಗಿದೆ

ಜಿಲ್ಲೆಯ 7 ತಾಲೂಕುಗಳ ತಾಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ ಆಗಿದ್ದು, ಗದಗ ತಾಲೂಕಿನ 18 ತಾಪಂ ಕ್ಷೇತ್ರಗಳಲ್ಲಿ ಹೊಂಬಳ- ಸಾಮಾನ್ಯ (ಮಹಿಳೆ), ಬಳಗಾನೂರ- ಹಿಂದುಳಿದ ಬ ವರ್ಗ(ಮಹಿಳೆ), ಚಿಕ್ಕಹಂದಿಗೋಳ- ಅನುಸೂಚಿತ ಪಂಗಡ(ಮಹಿಳೆ), ಹುಲಕೋಟಿ- ಹಿಂದುಳಿದ "ಅ' ವರ್ಗ, ಬಿಂಕದಕಟ್ಟಿ- ಸಾಮಾನ್ಯ (ಮಹಿಳೆ), ಕಳಸಾಪೂರ- ಅನುಸೂಚಿತ ಜಾತಿ, ಕುರ್ತಕೋಟಿ- ಸಾಮಾನ್ಯ (ಮಹಿಳೆ), ಅಂತೂರ ಬೆಂತೂರ- ಸಾಮಾನ್ಯ, ಚಿಂಚಲಿ- ಸಾಮಾನ್ಯ, ಹತಿರ್- ಸಾಮಾನ್ಯ, ಸೊರಟೂರ- ಸಾಮಾನ್ಯ, ಯಲಿಶಿರೂರ- ಸಾಮಾನ್ಯ, ನಾಗಾವಿ- ಅನುಸೂಚಿತ ಜಾತಿ(ಮಹಿಳೆ), ಲಕ್ಕುಂಡಿ- ಹಿಂದುಳಿದ "ಅ' ವರ್ಗ ಮಹಿಳೆ, ಅಡವಿಸೋಮಾಪುರ- ಅನುಸೂಚಿತ ಜಾತಿ(ಮಹಿಳೆ), ಕೋಟುಮಚಗಿ- ಹಿಂದುಳಿದ "ಅ' ವರ್ಗ, ಹುಯಿಲಗೋಳ- ಹಿಂದುಳಿದ "ಅ' ವರ್ಗ ಮಹಿಳೆ, ಹರ್ಲಾಪೂರ- ಸಾಮಾನ್ಯ ಕ್ಷೇತ್ರಗಳಾಗಿವೆ

ಲಕ್ಷೇಶ್ವರ ತಾಲೂಕಿನ 9 ತಾಪಂ ಕ್ಷೇತ್ರಗಳಲ್ಲಿ ಯಳವತ್ತಿ-ಸಾಮಾನ್ಯ(ಮಹಿಳೆ), ಗೊಜನೂರ- ಅನುಸೂಚಿತ ಜಾತಿ, ಪುಟಗಾಂವ ಬಡ್ಡಿ- ಸಾಮಾನ್ಯ (ಮಹಿಳೆ), ಶಿಗ್ಲಿ- ಹಿಂದುಳಿದ ವರ್ಗ "ಅ" (ಮಹಿಳೆ), ರಾಮಗೇರಿ- ಅನುಸೂಚಿತ ಪಂಗಡ(ಮಹಿಳೆ), -ದೊಡ್ಡೂರ- ಸಾಮಾನ್ಯ, ಸೂರಣಗಿ- ಸಾಮಾನ್ಯ, ಆದರಹಳ್ಳಿ- ಅನುಸೂಚಿತ ಜಾತಿ(ಮಹಿಳೆ), ಬಾಲೇಹೊಸೂರ- ಸಾಮಾನ್ಯ ಪ್ರಕಟವಾಗಿದೆ.

ಶಿರಹಟ್ಟಿ ತಾಲೂಕಿನ 9 ತಾಪಂ ಕ್ಷೇತ್ರಗಳ ಪೈಕಿ ಮಾಗಡಿ- ಸಾಮಾನ್ಯ, ಕಡಕೋಳ- ಅನುಸೂಚಿತ ಜಾತಿ, ರಣತೂರ- ಅನುಸೂಚಿತ ಜಾತಿ(ಮಹಿಳೆ), ಬೆಳ್ಳಟ್ಟಿ- ಸಾಮಾನ್ಯ(ಮಹಿಳೆ), ಕೊಂಚಿಗೇರಿ- ಸಾಮಾನ್ಯ, ಬನ್ನಿಕೊಪ್ಪ- ಅನುಸೂಚಿತ ಪಂಗಡ(ಮಹಿಳೆ), ಹೆಬ್ಬಾಳ- ಹಿಂದುಳಿದ ಅ ವರ್ಗ(ಮಹಿಳೆ), ಸೇವಾನಗರ- ಸಾಮಾನ್ಯ, ಕೊಗನೂರ- ಸಾಮಾನ್ಯ(ಮಹಿಳೆ) ಪ್ರಕಟ.

ರೋಣ ತಾಲೂಕಿನ 12 ತಾಪಂ ಕ್ಷೇತ್ರಗಳ ಪೈಕಿ ಹೊಳೆಆಲೂರ- ಹಿಂದುಳಿದ ಅ ವರ್ಗ, ಹುನಗುಂಡಿ- ಸಾಮಾನ್ಯ, ಮೆಣಸಗಿ- ಹಿಂದುಳಿದ ಅ ವರ್ಗ(ಮಹಿಳೆ), ಬೆಳವಣಕಿ- ಹಿಂದುಳಿದ ಬ ವರ್ಗ, ಯಾವಗಲ್ಲ- ಸಾಮಾನ್ಯ, ಹುಲ್ಲೂರ- ಸಾಮಾನ್ಯ(ಮಹಿಳೆ), ಸವಡಿ- ಅನುಸೂಚಿತ ಜಾತಿ(ಮಹಿಳೆ), ಕೊತಬಾಳ- ಅನುಸೂಚಿತ ಪಂಗಡ(ಮಹಿಳೆ), ಹಿರೇಹಾಳ- ಹಿಂದುಳಿದ ಅ ವರ್ಗ(ಮಹಿಳೆ), ಅಬ್ಬಿಗೇರಿ- ಸಾಮಾನ್ಯ, ಡ.ಸ.ಹಡಗಲಿ- ಸಾಮಾನ್ಯ, ಜಕ್ಕಲಿ- ಸಾಮಾನ್ಯ(ಮಹಿಳೆ).

ಗಜೇಂದ್ರಗಡ ತಾಲೂಕಿನ 9 ತಾಪಂ ಕ್ಷೇತ್ರಗಳ ಪೈಕಿ- ಸೂಡಿ- ಸಾಮಾನ್ಯ(ಮಹಿಳೆ), ಇಟಗಿ- ಸಾಮಾನ್ಯ, ಶಾಂತಗೇರಿ- ಅನುಸೂಚಿತ ಪಂಗಡ(ಮಹಿಳೆ), ಮುಶಿಗೇರಿ- ಸಾಮಾನ್ಯ, ರಾಜೂರ- ಅನುಸೂಚಿತ ಜಾತಿ, ಲಕ್ಕಲಕಟ್ಟಿ- ಸಾಮಾನ್ಯ, ಗೋಗೇರಿ- ಅನುಸೂಚಿತ ಜಾತಿ(ಮಹಿಳೆ), ನಿಡಗುಂದಿ- ಹಿಂದುಳಿದ ಅ ವರ್ಗ(ಮಹಿಳೆ), ಹಾಳಕೇರಿ- ಸಾಮಾನ್ಯ(ಮಹಿಳೆ)

ನರಗುಂದ 9 ತಾಪಂ ಕ್ಷೇತ್ರಗಳ ಪೈಕಿ ಚಿಕ್ಕನರಗುಂದ- ಸಾಮಾನ್ಯ, ಹಿರೇಕೊಪ್ಪ- ಸಾಮಾನ್ಯ, ಕಣಕೀಕೊಪ್ಪ- ಅನುಸೂಚಿತ ಪಂಗಡ(ಮಹಿಳೆ), ಹುಣಶೀಕಟ್ಟಿ- ಹಿಂದುಳಿದ "ಅ" ವರ್ಗ, ಸುರಕೋಡ- ಸಾಮಾನ್ಯ (ಮಹಿಳೆ), ಕೊಣ್ಣೂರ- ಹಿಂದುಳಿದ "ಅ" ವರ್ಗ (ಮಹಿಳೆ), ಹದಲಿ- ಸಾಮಾನ್ಯ (ಮಹಿಳೆ), ಶಿರೋಳ- ಅನುಸೂಚಿತ ಜಾತಿ(ಮಹಿಳೆ), ವಾಸನ- ಸಾಮಾನ್ಯ.

ಮುಂಡರಗಿ ತಾಲೂಕಿನ 11 ತಾಪಂ ಕ್ಷೇತ್ರಗಳ ಪೈಕಿ ಡಂಬಳ- ಸಾಮಾನ್ಯ (ಮಹಿಳೆ), ಡೋಣಿ- ಅನುಸೂಚಿತ ಜಾತಿ(ಮಹಿಳೆ), ಕದಾಂಪೂರ- ಅನುಸೂಚಿತ ಜಾತಿ, ಹಿರೇವಡ್ಡಟ್ಟಿ- ಸಾಮಾನ್ಯ, ಮೇವುಂಡಿ- ಸಾಮಾನ್ಯ, ಆಲೂರ- ಹಿಂದುಳಿದ ವರ್ಗ "ಅ" (ಮಹಿಳೆ), ಕಲಕೇರಿ- ಅನುಸೂಚಿತ ಜಾತಿ(ಮಹಿಳೆ), ಹಾರೋಗೇರಿ- ಅನುಸೂಚಿತ ಪಂಗಡ(ಮಹಿಳೆ), ಕೊರ್ಲಹಳ್ಳಿ- ಸಾಮಾನ್ಯ, ಹಮ್ಮಿಗಿ- ಸಾಮಾನ್ಯ (ಮಹಿಳೆ) ಹಾಗೂ ಬಾಗೇವಾಡಿ- ಸಾಮಾನ್ಯಕ್ಕೆ ಮೀಸಲಾತಿ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net