Hanuman ಹನುಮಂತನ ನೆನೆದರೆ ಶನಿ ದೋಷ ದೂರ

ನರೇಗಲ್ಲ ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಹನುಮಾನ್ (hanuman)ನರೇಗಲ್ಲ ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಹನುಮಾನ್ ಚಾಲೀಸಾ ಪಠಣೆಯ ನಂತರ ಸುಮಂಗಲೆಯರು ಶ್ರೀ ಮಾರುತಿಗೆ ಆರತಿ ಬೆಳಗಿದರು. ಚಾಲೀಸಾ ಪಠಣೆಯ ನಂತರ ಸುಮಂಗಲೆಯರು ಶ್ರೀ ಮಾರುತಿಗೆ ಆರತಿ ಬೆಳಗಿದರು.

Published on
ನರೇಗಲ್ಲ: ಭಗವಾನ್ ಶ್ರೀ ರಾಮಚಂದ್ರನ ದೂತನಾಗಿರುವ ಹನುಮಂತನನ್ನು Hanuman ನೆನೆದರೆ ಶನಿಯ ಶಾಪ ತಟ್ಟುವುದಿಲ್ಲ. ಆದ್ದರಿಂದ ಬಹುತೇಕರು ಶನಿವಾರ ದಿವಸ ಹನುಮಂತನಿಗೆ ನಡೆದುಕೊಳ್ಳುತ್ತಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಹನುಮಾನ್ ಚಾಲೀಸಾ ಪಠಣೆಯಲ್ಲಿ ಅವರು ಮಾತನಾಡಿದರು.
ಹನುಮಂತ ಅತ್ಯಂತ ಸಾಹಸವಂತ. ಅವನಲ್ಲಿನ ಶಕ್ತಿ ಏನೆಂಬುದು ಶ್ರೀರಾಮನಿಗೆ ಹೇಗೆ ಗೊತ್ತಿತ್ತೋ ಹಾಗೆಯೆ ಶನಿಗೂ ಇತ್ತು. ಆದ್ದರಿಂದ ಶನಿ ದೇವಾನುದೇವತೆಗಳನ್ನು, ಮಾನವರನ್ನು ಕಾಡಿದರೂ ಹನುಮಂತನನ್ನು ಮುಟ್ಟಲಿಲ್ಲ. ಹನುಮಂತನಲ್ಲಿನ ಅನೇಕ ಸುಗುಣಗಳನ್ನು ಕಂಡು ಶನಿ ದೇವರೆ ಅವನಿಗೆ ವರವನ್ನು ಕೊಟ್ಟರು.
ನಾನೆಂದರೆ ಎಲ್ಲರೂ ಹೆದರುತ್ತಾರೆ. ಯಾರ ಮೇಲೆ ನನ್ನ ಅವಕೃಪೆ ಬೀಳುತ್ತದೆಯೋ ಅವರಿಗೆ ಸಂಕಷ್ಟಗಳು ಪ್ರಾರಂಭವಾದವೆಂದೇ ಅರ್ಥ. ಆದರೆ, ಯಾರು ನಿನ್ನನ್ನು ಅನನ್ಯವಾಗಿ ಭಜಿಸುತ್ತಾರೆಯೋ ನಾನು ಅವರ ತಂಟೆಗೆ ಹೋಗುವುದಿಲ್ಲ ಎಂಬ ವರವನ್ನು ಶನಿದೇವರು ಹನುಮಂತನಿಗೆ ಕೊಟ್ಟಿರುವುದರಿಂದಲೆ ನಾವುಗಳೆಲ್ಲರೂ ಹನುಮಂತನಿಗೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ಅರ್ಚಕ ಶ್ರೀ ವಲ್ಲಭಭಟ್ಟ ಸದರಜೋಷಿ, ದತ್ತಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಕಾರ್ಯದರ್ಶಿ ರಘುನಾಥ ಕೊಂಡಿ, ಎ.ಜಿ. ಕುಲಕರ್ಣಿ, ಅಜಿತ ಕುಲಕರ್ಣಿ, ಆನಂದ ಕಾಳೆ, ಬಿ.ಎಲ್. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ರಂಗನಾಥ ಕುಲಕರ್ಣಿ, ಸನ್ಮತಿ ಸದರಜೋಷಿ, ನಿಖಿತಾ ಗ್ರಾಮಪುರೋಹಿತ, ರಾಜಶ್ರೀ ಕುಲಕರ್ಣಿ, ಪದ್ಮಾ ಕುಲಕರ್ಣಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net