ಇಟಗಿ ಮನೆತನದವರು ಕರ್ಮಠ ಬ್ರಾಹ್ಮಣರು, ಅಗ್ನಿಹೋತ್ರಿಗಳು ಆಗಿದ್ದ ಆಚಾರ್ಯರೊಬ್ಬರು ರಾಘವೇಂದ್ರಸ್ವಾಮಿಗಳ ಆರಾಧನೆ ನಿಮಿತ್ತ ಪ್ರತಿವರ್ಷ ಮಂತ್ರಾಲಯಕ್ಕೆ ಸೇವೆ ಮಾಡಲು ಹೋಗುತ್ತಿದ್ದರು. ಕೆಲಕಾಲದ ನಂತರ ಆಚಾರ್ಯರ ಸಂಧ್ಯಾಕಾಲಕ್ಕೆ ಈ ಸೇವೆ ಅಸಾಧ್ಯವೆನ್ನುವಂತಾದಾಗ ಅವರು ಮನನೊಂದು ರಾಯರನ್ನು ಸ್ಮರಿಸಿದರು. ಆಗ ರಾಯರು ವೃದ್ಧ ಬ್ರಾಹ್ಮಣನ ವೇಷದಲ್ಲಿ ಆಚಾರ್ಯರ ಮನೆಗೆ ಬಂದು ಅವರ ಪತ್ನಿಗೆ ಲಕ್ಷ್ಮೀ ನೃಸಿಂಹ ಸಾಲಿಗ್ರಾಮ, ಮೃತ್ತಿಕೆ ಹಾಗೂ ಮಂತ್ರಾಕ್ಷತೆಗಳಿದ್ದ ದೇವರ ಪೆಟ್ಟಿಗೆಯನ್ನು ಕೊಟ್ಟು ಹೋದರು ಎಂಬ ಪ್ರತೀತಿ ಇದೆ.