ಕಮಿಷನ್ ಹಣ ಪಾವತಿಸಲು ಆಗ್ರಹ: Ration distribution commission

ನರಗುಂದ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಸದಸ್ಯರು ಇ-ಕೆವೈಸಿ ಹಾಗೂ ಪಡಿತರ ವಿತರಣೆ ಕಮಿಷನ್ ಹಣ ಪಾವತಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಗುರುಲಿಂಗಪ್ಪ ಹೊಸಕೇರಿ, ಎಸ್.ವಿ. ಭೋಸಲೆ, ಎಂ.ಎಲ್. ಜಂಬಗಿ, ಎಂ.ಎಸ್. ಪಾಟೀಲ, ಅಲ್ಲಮಪ್ರಭು ಹದಲಿ ಇತರರಿದ್ದರು.
ನರಗುಂದ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಸದಸ್ಯರು ಇ-ಕೆವೈಸಿ ಹಾಗೂ ಪಡಿತರ ವಿತರಣೆ ಕಮಿಷನ್ ಹಣ ಪಾವತಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಗುರುಲಿಂಗಪ್ಪ ಹೊಸಕೇರಿ, ಎಸ್.ವಿ. ಭೋಸಲೆ, ಎಂ.ಎಲ್. ಜಂಬಗಿ, ಎಂ.ಎಸ್. ಪಾಟೀಲ, ಅಲ್ಲಮಪ್ರಭು ಹದಲಿ ಇತರರಿದ್ದರು.
Published on
ನರಗುಂದ: ಇ-ಕೆವೈಸಿ ಹಾಗೂ ಪಡಿತರ ವಿತರಣೆ ಕಮಿಷನ್ ಹಣ ಪಾವತಿಸುವಂತೆ ಆಗ್ರಹಿಸಿ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಪರಶುರಾಮ ಕಲಾಲ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪಡಿತರ ವಿತರಕರ ಸಂಘದ ಅಧ್ಯಕ್ಷ ಗುರುಲಿಂಗಪ್ಪ ಹೊಸಕೇರಿ ಮಾತನಾಡಿ, ರಾಜ್ಯ ಸರ್ಕಾರದ ಅನ್ನಭಾಗ್ಯ, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಕರು ಪ್ರತಿ ತಿಂಗಳು ವಿವಿಧ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಆದರೆ, ಕಳೆದ 7 ವರ್ಷಗಳಿಂದ ಮಾಡಿರುವ ಪಡಿತರ ಚೀಟಿಯ ಇ-ಕೆವೈಸಿ ಹಾಗೂ 5 ತಿಂಗಳಿನ ಪಡಿತರ ವಿತರಣೆ ಕಮಿಷನ್ ಹಣ ಪಾವತಿಸಿಲ್ಲ. ಕಮಿಷನ್ ಹಣ ಪಾವತಿಯಾಗದ ಕಾರಣ ವಿತರಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ನರಗುಂದ ತಾಲೂಕಿನಲ್ಲಿ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಿರುವ ಪಡಿತರದಾರರ ಇ-ಕೆವೈಸಿ ಕಾರ್ಯಕ್ಕೆ ವಿಪರೀತ ಸರ್ವರ್ ಸಮಸ್ಯೆ ಉಂಟಾಗಿದೆ. ಪರಿಣಾಮ ನ್ಯಾಯಬೆಲೆ ಅಂಗಡಿ ಮಾಲೀಕರು ಸಮಸ್ಯೆ ಅನುಭವಿಸುವಂತಾಗಿದೆ. ಸರ್ವರ್ ಸಮಸ್ಯೆಯಿಂದ ಪಡಿತರದಾರರು ದಿನನಿತ್ಯ ಕೂಲಿ ಕೆಲಸ ತೊರೆದು ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ. ಪಡಿತರ ಇ-ಕೆವೈಸಿ ಕಾರ್ಯವನ್ನು ಗ್ರಾಮ-1 ಅಥವಾ ಕರ್ನಾಟಕ-1 ಸೇವಾ ಕೇಂದ್ರಗಳಿಗೆ ವಹಿಸಿದರೆ ಪ್ರಗತಿ ಉತ್ತಮವಾಗುತ್ತದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ವಿ. ಭೋಸಲೆ, ಎಂ.ಎಲ್. ಜಂಬಗಿ, ಎಂ.ಎಸ್. ಪಾಟೀಲ, ಅಲ್ಲಮಪ್ರಭು ಹದಲಿ, ಸಂಜು ದೊಡ್ಡಮನಿ, ಮಾಲತಿ ಪೇಟೆ, ಕೆ.ಎನ್. ತಿಪ್ಪನಗೌಡ್ರ, ಬಿ.ಎಸ್. ಗೌಡಪ್ಪಗೌಡ್ರ, ಎಂ.ಆರ್. ಹುಡೇದಮನಿ, ಎಂ.ಎಸ್. ಬುಳಗನ್ನವರ, ಬಿ.ಕೆ. ಖಾನಪ್ಪಗೌಡ್ರ, ಎಂ.ಬಿ.ಹಿರೇಮಠ, ಎಸ್.ಎ. ಜಕಾತಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net