ಪೊಲೀಸರಿಂದ ಹಲ್ಲೆ ಆರೋಪ: ತಂದೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಿಚಾರಿಸಲು ತೆರಳಿದ ನನ್ನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ನಾಗನಗೌಡ ಅವರ ಮಗ ಕುಮಾರಗೌಡ ನಾಗನಗೌಡ ಕಳಕನಗೌಡ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಠಾಣೆಗೆ ಹೋಗಿ ನಮ್ಮ ತಂದೆಯನ್ನು ಏಕೆ ಬಂಧಿಸಿದ್ದರಿ? ಎಂದು ಕೇಳಿದರೆ, ಅತ್ಯಾಚಾರ ಪ್ರಕರಣದಲ್ಲಿ ನಿಮ್ಮ ತಂದೆಯನ್ನು ಬಂಧಿಸಿದ್ದೇವೆ ಎಂದರು. ಡಿಎನ್‌ಎ ಪರೀಕ್ಷಿಸಿ ಎಂದು ಹೇಳಿದರೆ, ನಮಗೆ ಕಾನೂನು ಪಾಠ ಮಾಡಬೇಡ ಎಂದು ಗದರಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.