ದೇವಸ್ಥಾನಗಳು ಸಾಂಸ್ಕೃತಿಕ ಪರಂಪರೆಯ ಸಂಕೇತ

ನರೇಗಲ್ಲ ಸಮೀಪದ ನಿಡಗುಂದಿ ಗ್ರಾಮದ ನೂತನ ಶ್ರೀ ವೀರಭದ್ರೇಶ್ವರ ಶಿಲಾ ಮಂದಿರದ ಅಡಿಗಲ್ಲು ಸಮಾರಂಭದಲ್ಲಿ ಜ. ವೀರಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಡಾ. ವಿಶ್ವನಾಥ ಸ್ವಾಮೀಜಿ, ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ವಿ.ಕೆ. ಗುರುಮಠ, ವಕೀಲ, ವೀರೇಶ ಕೂಗುಮಠ, ಕುಮಾರಸ್ವಾಮಿ ಕೋರಧಾನ್ಯಮಠ ಇತರರಿದ್ದರು
ನರೇಗಲ್ಲ ಸಮೀಪದ ನಿಡಗುಂದಿ ಗ್ರಾಮದ ನೂತನ ಶ್ರೀ ವೀರಭದ್ರೇಶ್ವರ ಶಿಲಾ ಮಂದಿರದ ಅಡಿಗಲ್ಲು ಸಮಾರಂಭದಲ್ಲಿ ಜ. ವೀರಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಡಾ. ವಿಶ್ವನಾಥ ಸ್ವಾಮೀಜಿ, ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ವಿ.ಕೆ. ಗುರುಮಠ, ವಕೀಲ, ವೀರೇಶ ಕೂಗುಮಠ, ಕುಮಾರಸ್ವಾಮಿ ಕೋರಧಾನ್ಯಮಠ ಇತರರಿದ್ದರು
Published on
ವಿಜಯವಾಣಿ ಸುದ್ದಿಜಾಲ ನರೇಗಲ್ಲ
ದೇವಸ್ಥಾನ ನಿರ್ಮಾಣವು ಭಕ್ತಿ, ಶಾಂತಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪೂರಿ ಜ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಸಮೀಪದ ನಿಡಗುಂದಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾ ಮಂದಿರದ ಅಡಿಗಲ್ಲು ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದ ಅವರು, ಪುರಾಣಗಳ ಪ್ರಕಾರ, ದೇವಸ್ಥಾನ ನಿರ್ಮಿಸುವವನು ರಾಜಸೂಯ ಮತ್ತು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ ಮತ್ತು ಏಳು ಜನ್ಮಗಳ ಪಾಪಗಳನ್ನು ನಾಶಮಾಡುತ್ತಾನೆ. ಇದು ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಬದಲಾಗಿ ದೈವಿಕ ಶಕ್ತಿ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಹರಡುವ ಕೇಂದ್ರವಾಗಿವೆ ಎಂದರು.
ದೇವಾಲಯಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಶಿವನ ಅವತಾರವಾದ ಶ್ರೀ ವೀರಭದ್ರಸ್ವಾಮಿಯನ್ನು ಪೂಜಿಸುವುದು ಒಂದು ಪುಣ್ಯಕಾರ್ಯವಾಗಿದೆ. ನಂಬಿ ಬಂದ ಭಕ್ತರಿಗೆ ಕಲ್ಪವೃಕ್ಷವಾಗಿ ವೀರಭದ್ರನ್ನು ನೆಲೆಸಿದ್ದಾನೆ. ಆಧ್ಯಾತ್ಮಿಕ ಜಗತ್ತಿನಲ್ಲಿ ದೇವಸ್ಥಾನಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತಹ ದೇವಾಲಯಗಳ ನಿರ್ಮಾಣ ಮತ್ತು ಸಂರಕ್ಷಣೆಯಿಂದ ಪಾಪ ವಿಮೋಚನೆಯಾಗುತ್ತದೆ. ಗ್ರಾಮಗಳಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಗ್ರಾಮಗಳಲ್ಲಿ ಹೆಚ್ಚೆಚ್ಚು ಆಧ್ಯಾತ್ಮಿಕ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಸಂಸ್ಕಾರಯುಕ್ತ ಸಚ್ಚಾರಿತ್ರ್ಯದಿಂದ ಮಾನವನ ಬದುಕು ಉನ್ನತಿಯತ್ತ ಸಾಗಲು ಸಾಧ್ಯವಾಗುತ್ತದೆ. ಕಾಯಕದಿಂದ ಮಾನವ ಜೀವನ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಶ್ರೀ ವೀರಭದ್ರಸ್ವಾಮಿ ದುಷ್ಟರ ಮರ್ದನ, ಶಿಷ್ಟರ ಪರಿಪಾಲನೆ ಮಾಡುವವನಾಗಿದ್ದಾನೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುವ ಶ್ರೀ ವೀರಭದ್ರಸ್ವಾಮಿ ಸಿಂಧುವಳ್ಳಿಯಲ್ಲಿ ನೆಲೆಗೊಳ್ಳಲಿರುವುದು ತಮ್ಮೆಲ್ಲರ ಸೌಭಾಗ್ಯವೇ ಆಗಿದೆ. ಶ್ರೀ ವೀರಭದ್ರೇಶ್ವರ ದೇವಾಲಯ ಅತ್ಯಂತ ಭವ್ಯವಾಗಿ ಸುಂದರವಾಗಿ ನಿರ್ಮಾಣಗೊಂಡು ಭಕ್ತರ ಬಾಳಿಗೆ ಆಶಾಕಿರಣವಾಗಲಿ ಎಂದು ಹೇಳಿದರು.
ಪೂರ್ಣ ಕುಂಭ ಸ್ವಾಗತ: ಗ್ರಾಮದ ಪ್ರಮುಖ ರಸ್ತೆಯಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಜ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಗ್ರಾಮದ ಸುಮಂಗಲಿಯರು ಪೂರ್ಣ ಕುಂಭಮ ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ವೃಂದಗಳೊಂದಿಗೆ ಸ್ವಾಗತಿಸಿದರು.
ರೋಣ ಬೂದಿಶ್ವರ ಹಿರೇಮಠದ ಡಾ. ವಿಶ್ವನಾಥ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ಗದಗ ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ವಿ.ಕೆ. ಗುರುಮಠ, ವೀರೇಶ ಕೂಗುಮಠ, ಕುಮಾರಸ್ವಾಮಿ ಕೋರಧಾನ್ಯಮಠ, ಜಗದೀಶ ಕರಡಿ ಸೇರಿದಂತೆ ಗ್ರಾಮಸ್ಥರು ಇದ್ದರು. ಶಿಕ್ಷಕ ಶರಣಪ್ಪ ಅರಮನಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net