ಗಾಳಿ-ಮಳೆಗೆ ನೆಲಕ್ಕುರುಳಿದ ಟವರ್

ಮುಂಡರಗಿ ಪಟ್ಟಣದ ಜಾಗೃತ್ ಸರ್ಕಲ್‌ನಲ್ಲಿ ಸೋಮವಾರ ಮನೆಯೊಂದರ ಮೇಲಿನ ಖಾಸಗಿ ಕಂಪನಿ ಮೊಬೈಲ್ ಟವರ್ ಭಾರಿ ಗಾಳಿಗೆ ನೆಲಕ್ಕುರುಳಿದೆ.
ಮುಂಡರಗಿ ಪಟ್ಟಣದ ಜಾಗೃತ್ ಸರ್ಕಲ್‌ನಲ್ಲಿ ಸೋಮವಾರ ಮನೆಯೊಂದರ ಮೇಲಿನ ಖಾಸಗಿ ಕಂಪನಿ ಮೊಬೈಲ್ ಟವರ್ ಭಾರಿ ಗಾಳಿಗೆ ನೆಲಕ್ಕುರುಳಿದೆ.
Published on
ಮುಂಡರಗಿ: ಭಾರಿ ಗಾಳಿ ಮಳೆಗೆೆ ಮನೆಯೊಂದರ ಮೇಲಿದ್ದ ಖಾಸಗಿ ಕಂಪನಿ ಮೊಬೈಲ್ ಟವರ್ ಧರೆಗುರುಳಿದ ಘಟನೆ ಸೋಮವಾರ ಸಂಜೆ ಪಟ್ಟಣದ ಜಾಗೃತ್ ಸರ್ಕಲ್‌ನಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟವರ್ ಬಿದ್ದಿದ್ದರಿಂದ ಮನೆಗೆ ಹಾನಿ ಉಂಟಾಗಿದೆ. ಮನೆಯ ಕಟ್ಟಡದ ಮೇಲ್ಭಾದ ಕುಂಬಿ ಬಿದ್ದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಿಂದ ಮನೆ ಮುಂದಿದ್ದ ವಿದ್ಯುತ್ ಕಂಬ ಸಹ ಮುರಿದಿದೆ. ಇದರಿಂದ ವಿದ್ಯುತ್ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ಪರದಾಡಿದರು.
ಘಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಿದ್ರಾಯ್ ಕಟ್ಟಿಮನಿ ಭೇಟಿ ನೀಡಿ, ಟವರ್ ನಿಯಮಾನುಸಾರ ಇದೇಯೋ ಇಲ್ಲವೋ ಕುರಿತು ಚರ್ಚಿಸಿ ನೋಟಿಸ್ ನೀಡಿ ಮುಂದಿನ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗಾಳಿ ಮಳೆಯಿಂದಾಗಿ ಗೋಂಧಳಿ ಓಣಿಯ ಮಂಜುಳಾ ಬೋಸ್ಲೆ ಮತ್ತು ರೇಣುಕಾ ಬೋಸ್ಲೆ ಎಂಬುವವರ ಮನೆಯ ಮೇಲ್ಚಾವಣಿಯ 6 ತಗಡು ಗಾಳಿಗೆ ಹಾರಿಹೋಗಿವೆ. ಹಾಗೆ ಮನೆಯೊಳಗಿದ್ದ ದಿನಸಿ ಸಾಮಗ್ರಿ ಸಹ ಹಾನಿಯಾಗಿವೆ. ಗಾಳಿಗೆ ಪಟ್ಟಣದ ಹಲವು ಕಡೆಗಳಲ್ಲಿ ಮರಗಳು ನೆಲಕ್ಕುರಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net