

ಪ್ರಮುಖ ಮುಖ್ಯಾಂಶಗಳು
ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾರ್ಯಗಳಿಗೆ 15-20 ಸಾವಿರು ರೂಪಾಯಿ ಖರ್ಚು ಮಾಡಿರುವ ರೈತರು ಬೆಳೆ ಕೈಗೆ ಬಾರದೇ ಆತಂಕದಲ್ಲಿದ್ದಾರೆ. ಮಳೆ ಕೊರತೆ ಮುಂದುವರಿದರೆ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಗೊಳಗಾಗುವ ಸಾಧ್ಯತೆ ಇದೆ.
— ದೇವರಾಜ ಸಂಗನಪೇಟಿ, ರೈತ
ಗದಗ ತಾಲೂಕಿನಾದ್ಯಂತ ಕೃಷಿ ಭೂಮಿಯಲ್ಲಿ ಮುಂಗಾರಿನ ಒಟ್ಟು 55 ಸಾವಿರ ಹೆಕ್ಟರ್ ಭೂಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಈವರೆಗೆ ಹೆಸರು ಸಂಪೂರ್ಣ ಹಾನಿಯಾಗಿದೆ. ಈವರೆಗೆ 52 ಸಾವಿರ ಹೆಕ್ಟರ್ ಬೆಳೆ ಹಾನಿ ಅಂದಾಜಿಸಲಾಗಿದೆ.
— ಮಲ್ಲಯ್ಯ ಕೊರಣ್ಣವರ, ಸಹಾಯಕ ಕೃಷಿ ನಿರ್ದೇಶಕರು, ಗದಗ