SCHOOLS ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ

SCHOOLS ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಶಾಲೆಗೆ ಅಗಡಿ ಕುಟುಂಬದವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಪ್ರೊಜೆಕ್ಟರ್ ಅನ್ನು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಚಾಲನೆ ನೀಡಿದರು.
SCHOOLS ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಶಾಲೆಗೆ ಅಗಡಿ ಕುಟುಂಬದವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡಿದ ಪ್ರೊಜೆಕ್ಟರ್ ಅನ್ನು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಚಾಲನೆ ನೀಡಿದರು.
Published on
ಲಕ್ಷ್ಮೇಶ್ವರ: ತಾಂತ್ರಿಕವಾಗಿ ಶಿಕ್ಷಣ ಕ್ಷೇತ್ರ ಸಾಕಷ್ಟು ಪ್ರಗತಿ SCHOOLS() ಸಾಧಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿಯೂ ಆಧುನಿಕ ಉಪಕರಣಗಳೊಂದಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ಅಭಿಪ್ರಾಯಪಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಶಾಲೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಹಿರಿಯರಾದ ರಾಜಕುಮಾರ ಅಗಡಿ ಅವರು ನೀಡಿದ ಪ್ರೊಜೆಕ್ಟರ್ ಚಾಲನೆ ನೀಡಿ ಮಾತನಾಡಿದರು.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ, ಹೊಸ ತಂತ್ರಜ್ಞಾನಗಳ ಬಳಕೆ ಮೂಲಕ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಅಗಡಿ ಕುಟುಂಬದವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಲ್.ಟಿ. ಪಾಟೀಲ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ, ಮುಖ್ಯಶಿಕ್ಷಕ ಡಿ.ಎನ್. ದೊಡ್ಡಮನಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಬಿ.ಎಂ. ಕುಂಬಾರ, ಎಫ್.ಎಸ್.ನದಾಫ, ಶಂಕರ ಬ್ಯಾಡಗಿ, ದ್ಯಾಮಣ್ಣ ಕಮತದ, ದಿಗಂಬರ ಪೂಜಾರ, ಶಿವಲಿಂಗಯ್ಯ ಹೊತಗಿಮಠ, ಕಲ್ಯಾಣಿ ತಟ್ಟಿ, ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಶಿಕ್ಷಕ ಸಿಬ್ಬಂದಿ ಎಸ್.ಎಸ್. ಮಹಾಲಿಂಗಶೆಟ್ಟರ, ಎಸ್.ಬಿ. ಲಮಾಣಿ, ಸವಿತಾ ಬೋಮಲೆ, ಈ.ಎಚ್. ಪೀಟರ್, ಆಯಿಷಾ ನದಾಫ, ಪ್ರಿಯಾ ಬನ್ನಿಕೊಪ್ಪ, ಭಾರತಿ, ಇತರರಿದ್ದರು. ಮುಖ್ಯಶಿಕ್ಷಕ ಡಿ.ಎನ್. ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಆರ್.ಬಿ. ಆಡರಕಟ್ಟಿ ನಿರೂಪಿಸಿ, ಎಸ್.ಎಂ. ಬೋಮಲೆ ಸ್ವಾಗತಿಸಿ, ಎಸ್.ಬಿ. ಲಮಾಣಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net