ಕೋಳಿ, ಮೊಟ್ಟೆ ಹೊತ್ತೊಯ್ದು ಆಕ್ರೋಶ form

ಕೋಳಿ ಫಾಮರ್್​ನಲ್ಲಿದ್ದ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ಯುವುದನ್ನು ಪೊಲೀಸರು ತಡೆದರು.
ಕೋಳಿ ಫಾಮರ್್​ನಲ್ಲಿದ್ದ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ಯುವುದನ್ನು ಪೊಲೀಸರು ತಡೆದರು.
Published on
ಕಳೆದ 15 ವರ್ಷದ ಹಿಂದೆ 23ನೇ ವಾರ್ಡ್​ನ ಉಣಚಗೇರಿ ಗ್ರಾಮದ ಕೂಗಳತೆಯಲ್ಲಿ ನಿರ್ವಿುಸಿದ ಕೋಳಿ ಫಾಮರ್್​ನಿಂದ ದುರ್ನಾತ ಹರಡುತ್ತಿದ್ದು, ಸುತ್ತಲಿನ ಬಹುತೇಕ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಶಾಲಾ ಮಕ್ಕಳ ಬಿಸಿಯೂಟಕ್ಕೆ ನೊಣಗಳ ಕಾಟ ಅಧಿಕವಾಗಿತ್ತು. ಕಳೆದ 6-7 ವರ್ಷದಿಂದ ನಿವಾಸಿಗಳು ಹಲವಾರು ಕಷ್ಟಗಳನ್ನು ಅನುಭವಿಸುತ್ತಿದ್ದರು. ಇದರ ಬಗ್ಗೆ ನಿವಾಸಿಗಳು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲದಂತಾಗಿತ್ತು. ಇದರಿಂದ ರೊಚ್ಚಿಗೆದ್ದ ಜನ ಫಾಮರ್್​ಗೆ ನುಗ್ಗಿದರು ಎಂದು ತಿಳಿದುಬಂದಿದೆ. 
ಸುತ್ತಮುತ್ತಲಿನ ನಿವಾಸಿಗಳು ಫಾಮರ್್​ಗೆ ನುಗ್ಗಿ ಕೈಗೆ ಸಿಕ್ಕಷ್ಟು ಕೋಳಿ ಹಾಗೂ ಮೊಟ್ಟೆ ಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್​ಐ ಪ್ರಕಾಶ ಡಿ. ಮತ್ತು ಪೊಲೀಸರು ನಿವಾಸಿಗಳನ್ನು ತಡೆದರು. ಈ ವೇಳೆ ಕೆಲವರು ಕೋಳಿ ಫಾಮ್ರ್ ನೆಲಸಮಗೊಳಿಸಲು ಮುಂದಾಗಿದ್ದರು ಎನ್ನಲಾಗುತ್ತಿದ್ದು, ಪೊಲೀಸರು ಸಾರ್ವಜನಿಕರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
2023ರಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಆಗಿನ ಜಿಲ್ಲಾಧಿಕಾರಿ ವೈಶಾಲಿ ಎಂ. ಅವರು 3 ದಿನದಲ್ಲಿ ಕೋಳಿ ಫಾಮ್ರ್ ತೆರವು ಮಾಡಿ ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಫಾಮ್ರ್ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಫಾಮ್ರ್ ತೆರವು ಮಾಡುವಂತೆ ಪುರಸಭೆ ಹಾಗೂ ತಹಸೀಲ್ದಾರ್​ಗೆ ನಿವಾಸಿಗಳು ಮನವಿ ಸಲ್ಲಿಸಿದ್ದರು. ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿ ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದರು ಎಂದು ನಿವಾಸಿಗಳು ದೂರುತ್ತಿದ್ದಾರೆ. ಅಧಿಕಾರಿಗಳಿಂದ ಸೂಕ್ತ ಪರಿಹಾರ ಸಿಗದ ಪರಿಣಾಮ ಫಾಮರ್್​ಗೆ ನುಗ್ಗಿದ್ದರು. ಫಾಮರ್್​ನಲ್ಲಿದ್ದ ಕೋಳಿ ಮತ್ತು ಮೊಟ್ಟೆಗಳಲ್ಲಿ ಶೇ. 50ರಷ್ಟು ಜನರ ಪಾಲಾಗಿವೆ ಎನ್ನಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net