Public ನೀರು, ಕಾಲುವೆ, ಬೀದಿದೀಪ ವ್ಯವಸ್ಥೆ ಸಾರ್ವಜನಿಕರ ಮನವಿ

Public ಲಕ್ಷ್ಮೇಶ್ವರದಲ್ಲಿ ರೈತಪರ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
Public ಲಕ್ಷ್ಮೇಶ್ವರದಲ್ಲಿ ರೈತಪರ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ನೇತೃತ್ವದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
Published on
ಲಕ್ಷ್ಮೇಶ್ವರ: ವಾರ್ಡ್ ನಂ.3ರಲ್ಲಿ ಮೂಲಸೌಕರ್ಯ (Public) ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಸಮಗ್ರ ರೈತ ಹೋರಾಟ ಸಮಿತಿ ಸದಸ್ಯರು ಬುಧವಾರ ಪುರಸಭೆ ಮುಂದೆ ಪ್ರತಿಭಟನೆ ಮಾಡಿದರು. ಕುಂದಗೋಳ ಅಭಿನವಬಸವಣ್ಣ ಶ್ರೀಗಳು, ದುಮ್ಮವಾಡ ಸರ್ಫಭೂಷಣ ಶ್ರೀಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಕೆಂಚಲಾಪುರ ಓಣಿಯಿಂದ ಎತ್ತು, ಆಕಳು, ಕೊಡ, ಚರಗಿ, ಪೊರಕೆ ಹಿಡಿದು ವಾದ್ಯಮೇಳದೊಂದಿಗೆ ಮುಖ್ಯ ಬಜಾರ್ ರಸ್ತೆಯ ಮೂಲಕ ಪುರಸಭೆಯ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ, ಪುರಸಭೆ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು.
ಸಮಗ್ರ ರೈತಪರ ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಕುಡಿಯುವ ನೀರು, ಕಾಲುವೆ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಸಾರ್ವಜನಿಕ ಶೌಚಗೃಹ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ತಿಂಗಳಿಗೊಮ್ಮೆ ನೀರು ಬರುತ್ತದೆ. ಪದೇಪದೆ ನದಿ ನೀರಿನ ಪೈಪ್‌ಲೈನ್ ದುರಸ್ತಿ, ವಿದ್ಯುತ್ ವ್ಯತ್ಯಯ ಕಾರಣ ಹೇಳಲಾಗುತ್ತಿದೆ. ಇದ್ದ ನೂರಾರು ಕೊಳವೆಬಾವಿಗಳ ಸ್ಥಿತಿ ಏನಾಗಿದೆ? ಪಂಪ್‌ಸೆಟ್ ದುರಸ್ತಿ ಮಾಡಿಸಬೇಕು, ಅನಿವಾರ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಬೇಕು. ನಿತ್ಯ ಕೂಲಿ ಮಾಡಿಯೇ ಬದುಕುವ ನೂರಾರು ಕುಟುಂಬಗಳು ಕೆಲಸ ಬಿಟ್ಟು ನೀರು ತರಲು ಪರದಾಡುತ್ತಿದ್ದಾರೆ ಎಂದು ದೂರಿದರು.
ಲಂಡಿ ಹಳ್ಳದುದ್ದಕ್ಕೂ ದೊಡ್ಡ ಗಿಡಗಂಟೆಗಳು ಬೆಳೆದು ಕೆಸರು ತುಂಬಿದೆ. ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ವಿಷಜಂತುಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಪ್ರತಿಭಟನೆ ಮಾಡುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ಸ್ವಚ್ಛತೆ, ನೀರು ಸರಬರಾಜು, ಬೆಳಕಿನ ವ್ಯವಸ್ಥೆ ಕಲ್ಪಿಸುವ ತ್ವರಿತ ಕೆಲಸ ಮಾಡಿದರು. ಹೋರಾಟದಿಂದ ಮಾತ್ರ ಅಧಿಕಾರಿಗಳು ಎಚ್ಚೆತ್ತ್ತುಕೊಳ್ಳುತ್ತಾರೆ ಎಂಬ ಮನಸ್ಥಿತಿಗೆ ಜನರು ಬರುಂತಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net