ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕ ರಾಜಶೇಖರ ಧನ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಬೇಕೆಂದು ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕ ರಾಜಶೇಖರ ಧನ್ಯಾಳ ಅವರಿಗೆ ಮನವಿ ಸಲ್ಲಿಸಿದರು.
Published on
ನರಗುಂದ: ಪಟ್ಟಣದಿಂದ 8 ಕಿಮೀ ಅಂತರದಲ್ಲಿರುವ ಭೈರನಹಟ್ಟಿ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. 
ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಕೆಲವೇ ಬಸ್‌ಗಳು ನಿಲುಗಡೆಗೊಳ್ಳುತ್ತವೆ. ಗ್ರಾಮದ ಬಹುತೇಕ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಪಟ್ಟಣಕ್ಕೆ ಬರುತ್ತಾರೆ. ಬೆಳಗ್ಗೆ ಸಮರ್ಪಕ ಬಸ್ ಸೌಲಭ್ಯ ಇಲ್ಲದ್ದರಿಂದ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಲವಾರು ವರ್ಷಗಳಿಂದ ಈ ಸಮಸ್ಯೆ ಇದೆ. ಹೀಗಾಗಿ ತಕ್ಷಣವೇ ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಘಟಕ ವ್ಯವಸ್ಥಾಪಕ  ರಾಜಶೇಖರ ಧನ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಕ್ರಿಯಿಸಿದ ಧನ್ಯಾಳ ಅವರು, ವಾರದೊಳಗೆ ಬಸ್ ಸೌಲಭ್ಯ ಒದಗಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 
ಎಬಿವಿಪಿ ತಾಲೂಕು ಅಧ್ಯಕ್ಷ ಸಿ.ಪಿ. ನೀಲಗುಂದ, ಜಯಲಕ್ಷ್ಮೀ ಪಾಟೀಲ, ಶಂಕ್ರಮ್ಮ ನರಸಾಪೂರ, ಶಾಹಿನಾ ಅಗಸರ, ಶಶಿಕಲಾ ಸಂಗಟಿ, ಶಾಂತಾ ಕೀಲಿಕೈ, ಮಾಲಾ ನರಸಾಪೂರ, ಪ್ರೇಮಾ ಚಿಕ್ಕನರಗುಂದ, ಅನೀತಾ ನರಸಾಪೂರ, ಪವಿತ್ರಾ ಐನಾಪೂರ, ಸುನಂದಾ ಐನಾಪೂರ, ಶಂಕ್ರಮ್ಮ ಐನಾಪೂರ ಇತರರಿದ್ದರು.

ಜಾಗೃತಿ ಅಭಿಯಾನ 

ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕೆಇಎಸ್ ಸಂಯುಕ್ತ ಪದವಿಪೂರ್ವ ಕಾಲೇಜು, ಮತದಾರರ ಸಾಕ್ಷರತ ಸಂಘ, ಎನ್ಸೆಸ್ಸೆಸ್ ವಿಭಾಗದ ಸಹಯೋಗದಲ್ಲಿ ಪ್ರಜಾಪ್ರಭುತ್ವದ ಗೋಡೆ ನಿರ್ಮಾಣ ಕುರಿತು ಮಂಗಳವಾರ ನಡೆಸಲಾಯಿತು. ಪ್ರಾಚಾರ್ಯ ಕೆ.ಎಂ. ಮಾಕನ್ನವರ, ಪ್ರೊ. ಎ.ಕೆ. ಬಂಡಗರ, ಎಚ್.ಎಸ್. ಶಿವಪ್ಪಯ್ಯನಮಠ, ಎಂ.ಡಿ. ಚಲವಾದಿ, ಎ.ಎ. ಚಂದನ್ನವರ, ಎಸ್.ಬಿ. ಕಮತರ, ಆರ್.ಎಂ. ಜೂಲಕಟ್ಟಿ, ಡಿ.ವೈ. ಹೂಗಾರ, ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net