ಗಜೇಂದ್ರಗಡ ಪಟ್ಟಣದ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ (SCHOOL) ಡಿ.ಆರ್.ಪಾಟೀಲ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು.
Published on:
Copied
Follow Us
ಗಜೇಂದ್ರಗಡ: (SCHOOL) ಶೌಚಗೃಹವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದ ಪಟ್ಟಣದ ಸ್ವಾತಂತ್ರ್ಯ ಪೂರ್ವದ, ಒಂದೂವರೆ ಶತಮಾನದ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊನೆಗೂ ಶೌಚಗೃಹದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಸಮಿತಿ ನಿರ್ದೇಶಕ ರಾಜು ಸಾಂಗ್ಲಿಕರ ಮಾಹಿತ ನೀಡಿದ್ದರು. ಹೀಗಾಗಿ ರಾಜ್ಯ ಯೋಜನಾ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ‘ಈ ಶಾಲೆಯಲ್ಲಿ 5 ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದು 22ಕ್ಕೂ ಅಧಿಕ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಶೌಚಗೃಹ ಇಲ್ಲದೆ ಬಯಲು ಜಾಗವೇ ಆಸರೆಯಾಗಿರುವುದು ಶೋಚನೀಯ ಸಂಗತಿ. ಸ್ಥಳೀಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಮಾಹಿತಿ ನೀಡಲಾಗಿದೆ. 3 ದಿನಗಳಲ್ಲಿ ನಿರ್ಮಿತಿ ಕೇಂದ್ರದವರಿಂದ 12ಕ್ಕೂ ಅಧಿಕ ಶೌಚಗೃಹಗಳನ್ನು ನಿರ್ಮಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದ್ದಾರೆ’ ಎಂದರು.
ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಅಶೋಕ ಬಾಗಮಾರ, ರಾಜು ಸಾಂಗ್ಲಿಕರ, ಅಸ್ಲಾಂ ಕೊಪ್ಪಳ, ಸಿಆರ್‌ಪಿ ಕಳಕೇಶ ವನ್ನಾಲ, ಬಿ.ಎಸ್. ಹಿರೇಮಠ, ಎಸ್.ಕೆ. ಮಠದ ಇತರರು ಇದ್ದರು.