ಶಾಲೆಯ ಕಾಮಗಾರಿಗೆ ಆದ್ಯತೆ ಕೊಡಿ school

ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ ನರೇಗಾ ಕ್ರಿಯಾ ಯೋಜನೆ ತಯಾರಿಸುವ ಕುರಿತು ಗುರುವಾರ ನಡೆದ ಗ್ರಾಮ ಸಭೆ ಜರುಗಿತು.
ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ ನರೇಗಾ ಕ್ರಿಯಾ ಯೋಜನೆ ತಯಾರಿಸುವ ಕುರಿತು ಗುರುವಾರ ನಡೆದ ಗ್ರಾಮ ಸಭೆ ಜರುಗಿತು.
Published on
ಗಜೇಂದ್ರಗಡ: ನರೇಗಾ ಯೋಜನೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಜತೆಗೆ ಶಾಲೆಗೆ school ಸಂಬಂಧಿಸಿದ ಕಾಮಗಾರಿಗಳನ್ನು ಕಡ್ಡಾಯವಾಗಿ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ ನರೇಗಾ ಕ್ರಿಯಾ ಯೋಜನೆ ತಯಾರಿಸುವ ಕುರಿತು ಗುರುವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು 5 ಲಕ್ಷ ರೂ.ವರೆಗೂ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಬಹುದು. ಅದರಲ್ಲಿ ಕೃಷಿ ಹೊಂಡ, ಎರೆಹುಳು ಘಟಕ, ಕೊಳವೆ ಭಾವಿ ಮರುಪೂರಣ ಘಟಕ, ಮೇಕೆ ಶೆಡ್, ದನದ ದೊಡ್ಡಿ, ತೋಟಗಾರಿಕೆ ಇಲಾಖೆಯಲ್ಲಿ ಪಪ್ಪಾಯಿ ಮತ್ತು ಬಾಳೆ ಹೊರತುಪಡಿಸಿ ಉಳಿದಂತೆ ಮಾವು, ಕರಿಬೇವು, ಸೀಬೆ, ನುಗ್ಗೆ, ತೆಂಗು, ಸೀತಾಫಲ ಸೇರಿದಂತೆ ದೀರ್ಘಕಾಲಿಕ ಬೆಳೆಗಳನ್ನು ನರೇಗಾದಲ್ಲಿ ಮಾಡಿಕೊಳ್ಳಲು ಅವಕಾಶವಿದೆ.
ಇಂತಹ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿಕೊಳ್ಳಬಹುದು. ಆಸಕ್ತ ರೈತರು ಕ್ರಿಯಾಯೋಜನೆಯಲ್ಲಿ ಹೆಸರನ್ನು ಅಳವಡಿಸಿಕೊಂಡು ನಂತರ ಕೆಲಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಾಲಾಭಿವೃದ್ಧಿಗೆ ಗಮನ: ನರೇಗಾ ಅಡಿ ಶಾಲೆಗೆ ಬೇಕಾಗುವಂತ ಶೌಚಗೃಹ, ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರತಿ ಶಾಲೆಗಳಲ್ಲಿ ಶೌಚಗೃಹ, ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನ ಪರಿಶೀಲಿಸಿ, ಯಾವ ಶಾಲೆಗೆ ಯಾವುದು ಅವಶ್ಯಕವಾಗಿದೆ ಅವುಗಳನ್ನು ಕಡ್ಡಾಯವಾಗಿ ಹೆಸರನ್ನು ಸೇರಿಸಿ ಕ್ರಿಯಾಯೋಜನೆಯಲ್ಲಿ ತಯಾರಿಸಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಪೂನಾಬಾಯಿ ರಾಠೋಡ, ಸದಸ್ಯರಾದ ಲಿಂಬಣ್ಣ ಗಡಾದ, ದೊಡ್ಡಮ್ಮ ಅಗಸಿಮನಿ, ಲಕ್ಷ್ಮವ್ವ ಕೌಡಕಿ, ಶೇಖಪ್ಪ ಪೂಜಾರ, ದುರಗಪ್ಪ ಕೋತಬಾಳ, ಪರಪ್ಪ ತೊಂಡಿಹಾಳ, ಸಂಗಪ್ಪ ಪೂಜಾರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net