Dengue.ಡೆಂಗೆಗೆ ಮುಂಜಾಗ್ರತೆಯೇ ದಿವ್ಯೌಷಧ

Dengue. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಶ್ರೀ ಮಾರುತೇಶ್ವರ ಪ್ರೌಢಶಾಲೆಯಲ್ಲಿ ಡೆಂಗೆ ವಿರೋಧಿ ಮಾಸಾಚರಣೆ ಕುರಿತು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿದರು.
Dengue. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಶ್ರೀ ಮಾರುತೇಶ್ವರ ಪ್ರೌಢಶಾಲೆಯಲ್ಲಿ ಡೆಂಗೆ ವಿರೋಧಿ ಮಾಸಾಚರಣೆ ಕುರಿತು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿದರು.
Published on
ಗಜೇಂದ್ರಗಡ::ಡೆಂಗೆಗೆ ನಿರ್ದಿಷ್ಟ ಚಿಕಿತ್ಸೆ (Dengue) ಎಂಬುದಿಲ್ಲ. ಇದರ ನಿಯಂತ್ರಣಕ್ಕೆ ಮುಂಜಾಗ್ರತೆಯೇ ದಿವ್ಯೌಷಧ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ. ಬೆನ್ನೂರ ಹೇಳಿದರು. ತಾಲೂಕಿನ ಶಾಂತಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಲಕ್ಕಲಕಟ್ಟಿ ಗ್ರಾಮದ ಶ್ರೀ ಮಾರುತೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಐಇಸಿ ವಿಭಾಗದ ವತಿಯಿಂದ ಆಯೋಜಿಸಿದ್ದ ಡೆಂಗೆವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ’ ಎಂಬ ಘೋಷ ವಾಕ್ಯದೊಂದಿಗೆ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಸೊಳ್ಳೆಗಳು ಬೆಳೆಯಲು ಪೂರಕವಾಗಿರುವ ಪರಿಸರ ಶುಚಿಯಾಗಿಡುವುದರಿಂದ ಮಾರಕ ರೋಗಗಳಿಂದ ದೂರ ಇರಬಹುದಾಗಿದೆ. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಬಿ. ಶ್ಯಾಶೆಟ್ಟಿ ಮಾತನಾಡಿ, ಡೆಂೆ ಜ್ವರದ ಲಕ್ಷಣಗಳು ಹಾಗೂ ಸ್ವರಕ್ಷಣಾ ವಿಧಾನಗಳ ಕುರಿತು ವಿವರ ನೀಡಿದರು. ಮುಖ್ಯಶಿಕ್ಷಕ ವಿ.ಜಿ. ಹೆಗಡೆ, ಸಹ ಶಿಕ್ಷಕರಾದ ಎ.ಬಿ. ಮಾಲಿಪಾಟೀಲ, ಎನ್.ಎಂ. ಜವಳಿ, ಆರ್. ನಾಗರಾಜ, ಆರ್. ಡಿ. ಉಣಕಲ್, ಯು.ಜಿ. ಸೊಪ್ಪಿಮಠ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಿ.ಸಿ. ನಾಯಕ, ಸಮುದಾಯ ಆರೋಗ್ಯ ಅಧಿಕಾರಿ ಎಂ.ಜಿ. ತೊಟಗೇರ, ಆಶಾಕಾರ್ಯಕರ್ತೆ ಎಲ್.ವಿ. ಹಿರೇಮಠ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net