ಹಿಂದೂ ಸಮ್ಮೇಳನದಲ್ಲಿ Hindu Sammelan ಗಮನ ಸೆಳೆದ ಪೂರ್ಣಕುಂಭ ಮೆರವಣಿಗೆ

ಹಿಂದೂ ಸಮ್ಮೇಳನ Hindu Sammelan ಪ್ರಯುಕ್ತ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾನುವಾರ ಬೃಹತ್ ಶೋಭಾ ಯಾತ್ರೆ ನಡೆಯಿತು. ಜನಸಾಗರ, ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಹಿಂದೂ ಸಮ್ಮೇಳನ Hindu Sammelan ಪ್ರಯುಕ್ತ ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾನುವಾರ ಬೃಹತ್ ಶೋಭಾ ಯಾತ್ರೆ ನಡೆಯಿತು. ಜನಸಾಗರ, ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
Published on
ಲಕ್ಷ್ಮೇಶ್ವರ: ಹಿಂದೂ ಸಮ್ಮೇಳನ Hindu Sammelan ಪ್ರಯಕ್ತ ಬೃಹತ್ ಶೋಭಾಯಾತ್ರೆಗೆ ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ ಬಳಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಚಾಲನೆ ನೀಡಿ ಶೋಭಾಯಾತ್ರೆಗೆ ಶುಭ ಹಾರೈಸಿದರು.
ಹಾವಳಿ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯು ಬಜಾರ ರಸ್ತೆ, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾೃಂಡ್, ಅಂಬೇಡ್ಕರ್ ನಗರ, ಆದಯ್ಯ ಸರ್ಕಲ್ ಮೂಲಕ ಸಾಗಿ ಸೋಮೇಶ್ವರ ದೇವಸ್ಥಾನದ ತೇರಿನಮನೆವರೆಗೆ ತೆರಳಿ ಸಂಪನ್ನಗೊಂಡಿತು.
ಶೋಭಾಯಾತ್ರೆಯಲ್ಲಿ ಕಲಾತಂಡಗಳು, ವಾದ್ಯಗಳು, ಸ್ತಬ್ಧಚಿತ್ರಗಳು, ವೀರಗಾಸೆ, ಕುದುರೆಕಾರ ಕುಣಿತ, ಡೊಳ್ಳು, ಕಹಳೆ, ನಂದಿಕೋಲ, ಜಾಂಜಮೇಳ, ಲಂಬಾಣಿ ಜಾನಪದ ತಂಡ, ಭಜನಾ ತಂಡಗಳು, ನೂರಾರು ಜೋಡೆತ್ತುಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. 
ನೂರಾರು ಮಹಿಳೆಯರು ಪೂರ್ಣಕುಂಭಗಳನ್ನು ಹೊತ್ತು ಸಾಗಿದರು. ಭಾರತ ಮಾತಾ, ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್, ಪುಲಿಗೇರಿ ಸೋಮನಾಥ, ಶ್ರೀರಾಮ, ಹನುಮಾನ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್, ಇಮ್ಮಡಿ ಪುಲಿಕೇಶಿ, ಸಿಂಧೂರ ಲಕ್ಷ್ಮಣ, ಮಾದವ ಗೋಲ್ವಾಲ್ಕರ, ಕೇಶವ ಬಲಿರಾಂ ಹೆಡ್ಗೆವಾರ, ಸಂತರ ಶರಣರ ಭಾವಚಿತ್ರಗಳು ಮೆರವಣಿಗೆಗೆ ಮತ್ತಷ್ಟು ಕಳೆ ಹೆಚ್ಚಿದವು. 
ಕೇಸರಿ ಶಾಲು ಹಾಕಿಕೊಂಡ ಸಾವಿರಾರು ಯುವಕರು ಮೆರವಣಿಗೆಯಲ್ಲಿ ಸಾಗಿದರು. ಶ್ರೀರಾಮ, ಬಸವಣ್ಣ, ಅಕ್ಕಮಹಾದೇವಿ ಇತ್ಯಾದಿ ವೇಷಗಳನ್ನು ಧರಿಸಿದ್ದ ಮಕ್ಕಳು ಗಮನ ಸೆಳೆದರು. 
ಶಾಸಕ ಡಾ.ಚಂದ್ರು ಲಮಾಣಿ, ಮುಖಂಡರಾದ ಸುನೀಲ ಮಹಾಂತಶೆಟ್ಟರ, ವಿಜಯ ಹತ್ತಿಕಾಳ, ಬಸವರಾಜ ಬೆಂಡಿಗೇರಿ, ಚಂದ್ರು ಹಂಪಣ್ಣವರ, ಜಾನು ಲಮಾಣಿ, ಬಸವಣೆಪ್ಪ ನಂದೆಣ್ಣವರ, ಪ್ರಕಾಶ ಉಪನಾಳ,  ರಾಜಣ್ಣ ಅರಳಿ, ಸೋಮೇಶ ಉಪನಾಳ, ಗಜಾನನ ಹೆಗಡೆ, ಚಿಕ್ಕರಸ ಪೂಜಾರ, ಬಸವೇಶ ಮಹಾಂತಶೆಟ್ಟರ, ರಾಮರಾವ ವೆರ್ಣೇಕರ, ಈರಣ್ಣ ಮಜ್ಜಗಿ, ಕೃಷ್ಣ್ಣಮೂರ್ತಿ, ಪೂರ್ಣಾಜಿ ಕರಾಟೆ, ಗುರುರಾಜ ಪಾಟೀಲಕುಲಕರ್ಣಿ, ಗಂಗಾಧರ ಮೆಣಸಿನಕಾಯಿ, ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಗಿರೀಶ ಅಗಡಿ, ಮಂಜುನಾಥ ಕೆಂಚನಗೌಡ್ರ, ಕೆ.ಒ. ಹುಲಿಕಟ್ಟಿ, ಅಜಿತ ಬರಗಾಲಿ, ರಾಮಣ್ಣ ಅಡಗಿಮನಿ, ಅಶ್ವಿನಿ ಅಂಕಲಕೋಟಿ, ನಿರ್ಮಲಾ ಅರಳಿ, ರತ್ನಾ ಕರ್ಕಿ, ರೇಖಾ ವಡಕಣ್ಣವರ, ಶೈಲಾ ಆದಿ, ಮಾಲಾದೇವಿ ದಂದರಗಿ, ನೀಲಪ್ಪ ಹತ್ತಿ, ರಂಗಣ್ಣ ಬದಿ, ಸುರೇಶ ಕುರ್ಡೇಕರ, ನಿಂಗಪ್ಪ ಬನ್ನಿ, ವೈಭವ ಗೋಗಿ, ನಾಗರಾಜ ಪೂಜಾರ, ಮುರಗೇಂದ್ರಯ್ಯ ಹಿರೇಮಠ, ಗೋಪಾಲ ಪಡ್ನೀಸ್, ಕೃಷ್ಣ ಕುಲಕರ್ಣಿ, ಶ್ರೀಕಾಂತ ಪೂಜಾರ, ರಾಘವೇಂದ್ರ ಪೂಜಾರ, ರಮೇಶ ತೊರಗಲ್ಲ, ವೀರೇಶ ಸಾಸಲವಾಡ, ಭೀಮಣ್ಣ ಯಂಗಾಡಿ,  ವೈಭವ ಗೋಗಿ, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.    
ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಮಿತಿಯಿಂದ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾ ಯಾತ್ರೆ ನಿಮಿತ್ತ ಹಿಂದೂ ಸಂಘಟನೆಗಳ ನೂರಾರು ಯುವಕರು ನೂರಾರು ಬೈಕ್‌ಗಳನ್ನೇರಿ ರ‌್ಯಾಲಿ ನಡೆಸಿದರು. 
ಯುವ ಮುಖಂಡರು ಸಮ್ಮೇಳನ ಪದಾಧಿಕಾರಿಗಳು ಚಾಲನೆ ನೀಡಿದರು, ಪಂಪವೃತ್ತದಿಂದ, ಬಸ್ತಿಕೇರಿ, ವಿದ್ಯಾರಣ್ಯವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮ್ಯಾಗೇರಿ ಓಣಿ, ಕೋರ್ಟ್ ಸರ್ಕಲ್, ತಹಸೀಲ್ದಾರ್ ಆಫೀಸ್, ದೂದ ನಾನಾ ದರ್ಗಾ, ಭರಮದೇವರ ಸರ್ಕಲ್, ಬಜಾರ ರಸ್ತೆ, ಪುರಸಭೆ, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾಂಡ್, ಗದಗ ನಾಕಾ ಮುಖಾಂತರ  ಸೋಮೇಶ್ವರ ತೇರಿನಮನೆಗೆ ಮುಕ್ತಾಯಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net